ಹೊನ್ನಾವರದ ಎರಡು ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಯೋಗ ನರಸಿಂಹ ಸ್ಟೋರ್ಸ ಹಾಗೂ ಭಾನವಿ ಎಂಟರ್ಪ್ರೈಸಸ್’ಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹಣ-ಸಾಮಗ್ರಿ ಕದ್ದು ಪರಾರಿಯಾಗಿದ್ದಾರೆ.
ಹೊನ್ನಾವರ ಗುಣವಂತೆಯ ವಿದ್ಯುತ್ ಗುತ್ತಿಗೆದಾರ ಸೀತಾರಾಮ ಗೌಡ ಅವರು ಬಾಡಿಗೆ ಆಧಾರದಲ್ಲಿ ಯೋಗ ನರಸಿಂಹ ಸ್ಟೋರ್ಸ ಎಂಬ ವ್ಯಾಪಾರಿ ಮಳಿಗೆ ನಡೆಸುತ್ತಿದ್ದರು. ಸೆ 20ರ ರಾತ್ರಿ 8.45ಕ್ಕೆ ಅವರು ಅಂಗಡಿಗೆ ಬಾಗಿಲು ಹಾಕಿದ್ದರು. ಮರುದಿನ ಬಂದು ನೋಡಿದಾಗ ಅಂಗಡಿಯ ಬಾಗಿಲು ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಅಂಗಡಿಯಲ್ಲಿದ್ದ 4500ರೂ ಹಣ ಕಾಣೆಯಾಗಿತ್ತು.
ಯೋಗ ನರಸಿಂಹ ಸ್ಟೋರ್ಸನಲ್ಲಿದ್ದ ಕಾಸು ಕದ್ದ ಕಳ್ಳರು ಅದಾದ ನಂತರ ಎದುರಿನ ಬೀದಿಯಲ್ಲಿದ್ದ ಭಾನವಿ ಎಂಟರ್ಪ್ರೈಸಸ್ ಮೇಲೆ ಕಣ್ಣು ಹಾಕಿದ್ದರು. ಅಲ್ಲಿಯೂ ಬಾಗಿಲು ಮುರಿದು ಕಳ್ಳತನ ಮಾಡಿದ್ದರು. ಭಾನವಿ ಎಂಟರಪ್ರೆöÊಸಸ್’ಲಿ 57 ಸಾವಿರ ರೂ ಮೌಲ್ಯದ ತಂತಿಗಳು ಕಣ್ಮರೆಯಾಗಿದ್ದವರು. ಈ ವಿಷಯದ ಬಗ್ಗೆ ಸೀತಾರಾಮ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಂಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
