ಶಿರಸಿಯಲ್ಲಿ ಸಿಲೆಂಡರ್ ಸ್ಪೋಟವಾಗಿದೆ. ಸ್ಪೋಟದ ತೀವೃತೆಗೆ ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದ್ದು, 21 ವರ್ಷದ ಯುವತಿಯೊಬ್ಬರ ಸಜೀವ ದಹನವಾಗಿದೆ.
ಶಿರಸಿ ಮರ್ಕಿಕೊಡ್ಲು ಗ್ರಾಮದಲ್ಲಿ ಈ ಅವಘಡ ನಡೆದಿದೆ. ಅಲ್ಲಿನ ರಂಜಿತಾ ದೇವಾಡಿಗ ಅವರು ಬೆಂಕಿ ಜ್ವಾಲೆಯಲ್ಲಿ ಬೆಂದು ಸಾವನಪ್ಪಿದ್ದಾರೆ. ರಂಜಿತಾ ದೇವಾಡಿಗ ಅವರು ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಅನಾರೋಗ್ಯದ ಕಾರಣ ಅವರು ಮಂಗಳವಾರ ಕಾಲೇಜಿಗೆ ಹೋಗಿರಲಿಲ್ಲ. ಮನೆಯಲ್ಲಿಯೇ ಅವರು ವಿಶ್ರಾಂತಿಪಡೆಯುತ್ತಿದ್ದು, ಸಂಜೆ ವೇಳೆ ಏಕಾಏಕಿ ಅವರ ಮನೆಯಲ್ಲಿದ್ದ ಸಿಲೆಂಡರ್ ಸ್ಪೋಟವಾಯಿತು.
ರಂಜಿತಾ ದೇವಾಡಿಗ ಕುಟುಂಬದ ಎಲ್ಲರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಅವಘಡದ ವೇಳೆ ಮನೆಯವರು ಕೆಲಸಕ್ಕೆ ಹೋಗಿದ್ದರು. ಸಿಲೆಂಡರ್ ಸ್ಪೋಟದ ವಿಷಯ ಗೊತ್ತಾಗುವುದರೊಳಗೆ ರಂಜಿತಾ ದೇವಾಡಿಗ ಅವರು ಕರಕಲಾಗಿದ್ದರು. ಅವರು ಮನೆಯಲ್ಲಿ ಒಬ್ಬರೆ ಇದ್ದಾಗ ಈ ದುರಂತ ನಡೆದಿದೆ. ಸ್ಪೋಟದ ತೀವೃತೆಗೆ ಮನೆ ಗೋಡೆಗಳು ಬಿರುಕು ಮೂಡಿದೆ. ಕೆಲ ಗೋಡೆ ಉರಳಿ ಬಿದ್ದಿದೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ಆರಿಸುವ ಕೆಲಸ ಮಾಡುತ್ತಿದ್ದಾರೆ. ಸಿಲೆಂಡರ್ ಸ್ಪೋಟಕ್ಕೆ ನೈಜ ಕಾರಣದ ಬಗ್ಗೆ ತನಿಖೆ ನಡೆದಿದೆ.
