ಕಾರವಾರದ ಮಯೂರ್ ಕೋಚ್ರೆಕರ್ ಹಾಗೂ ಶುಭಂ ಕೋಚ್ರಕೆರ್ ನಡುವೆ ಹೊಡೆದಾಟ ನಡೆದಿದೆ. ಜಗಳ ತಪ್ಪಿಸಲು ಬಂದ ವಿನಾಯಕ ನಾಯ್ಕ ಅವರನ್ನು ಶುಭಂ ಕೋಚ್ರೇಕರ್ ಅವರು ನಿಂದಿಸಿದ್ದಾರೆ.
ಸೆಪ್ಟೆoಬರ್ 22ರ ಸಂಜೆ ಸರ್ವೋದಯನಗರದ ಮಯೂರ್ ಕೋಚ್ರೆಕರ್ ಅವರು ತಮ್ಮ ಸ್ನೇಹಿತರಾದ ನಂದನಗದ್ದಾದ ವಿನಾಯಕ ನಾಯ್ಕ ಅವರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ವಿನಾಯಕ ನಾಯ್ಕ ಅವರನ್ನು ಅವರ ಮನೆ ಬಳಿ ಬಿಡಲು ತೆರಳುತ್ತಿದ್ದ ಮಯೂರ್ ಕೋಚ್ರೆಕರ್ ಅವರಿಗೆ ತೆಲಂಗ ರಸ್ತೆ ಕನ್ನಡ ಶಾಲೆ ಬಳಿ ಹಿರೇಶಟ್ಟಾದ ಶುಭಂ ಕೋಚ್ರಕರ್ ಅವರು ಎದುರಾದರು.
`ನಿನ್ನ ನಮ್ಮನ್ನು ಓವರ್‌ಟೆಕ್ ಮಾಡಿದ್ದು ನೀನೇ ಅಲ್ಲವಾ?’ ಎಂದು ಶುಭಂ ಕೋಚ್ರಕರ್ ಅವರು ಮಯೂರ್ ಕೋಚ್ರೆಕರ್ ಅವರಲ್ಲಿ ಪ್ರಶ್ನಿಸಿದರು. `ಹೌದು, ನೀನು ನಿಧಾನವಾಗಿ ಹೋಗುತ್ತಿದ್ದೆಯಲ್ಲ?’ ಎಂದು ಮಯೂರ್ ಕೋಚ್ರೆಕರ್ ಅವರು ಉತ್ತರಿಸಿದರು. ಇದರಿಂದ ಸಿಟ್ಟಾದ ಶುಭಂ ಕೋಚ್ರಕರ್ ಬೈಗುಳ ಶುರು ಮಾಡಿದರು. ಆ ಬೈಗುಳ ಅತಿರೇಖಕ್ಕೆ ತಿರುಗಿದ್ದು, ಶುಭಂ ಕೋಚ್ರಕರ್ ಅವರು ಮಯೂರ್ ಕೋಚ್ರೆಕರ್ ಅವರ ಮೇಲೆ ಕೈ ಮಾಡಿದರು.
ಶುಭಂ ಕೋಚ್ರಕರ್ ಅವರು ಮಯೂರ್ ಕೋಚ್ರೆಕರ್ ಅವರ ಕೆನ್ನೆಯ ಕೆಳಗೆ ಗುದ್ದಿದರು. ಇದನ್ನು ತಪ್ಪಿಸಲು ಬಂದ ವಿನಾಯಕ ನಾಯ್ಕ ಅವರಿಗೂ ಶುಭಂ ಕೋಚ್ರಕರ್ ಅವರು ಕೆಟ್ಟದಾಗಿ ನಿಂದಿಸಿದರು. ಈ ಬಗ್ಗೆ ಮಯೂರ್ ಕೋಚ್ರೆಕರ್ ಅವರು ಪೊಲೀಸರ ಮೊರೆ ಹೋಗಿದ್ದು, ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Discussion about this post