ಮೇಷ ರಾಶಿ: ಸ್ನೇಹಿತರ ಜೊತೆ ಉತ್ತಮವಾಗಿ ವರ್ತಿಸಿ ಅವರ ನೆರವಿನಿಂದ ಕೆಲಸದಲ್ಲಿ ಮುನ್ನಡೆ ಪಡೆಯಲು ಪ್ರಯತ್ನಿಸಿ. ವಾಹನ ಚಲಾಯಿಸುವಾಗ ಅತಿಯಾದ ವೇಗ ಬೇಡ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಸಿಗಲಿದೆ.
ವೃಷಭ ರಾಶಿ: ನಿಮ್ಮ ಶಿಸ್ತಿನ ಕೆಲಸದ ಬಗ್ಗೆ ಅನೇಕರಿಂದ ಮೆಚ್ಚುಗೆ ಸಿಗಲಿದೆ. ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧವಾಗಿರಿ. ಆತ್ಮೀಯರ ಜೊತೆ ಕಾಲ ಕಳೆಯಿರಿ.
ಮಿಥುನ ರಾಶಿ: ಈ ದಿನ ನೀವು ಮಾಡುವ ಕೆಲಸಗಳು ಯಶಸ್ಸು ತಲುಪುತ್ತದೆ. ಆತುರದ ನಿರ್ಧಾರಗಳಿಂದ ದೂರವಿರಿ. ನಿಮ್ಮ ಮಾತು ಹಿತ-ಮಿತವಾಗಿರಲಿ.
ಕರ್ಕ ರಾಶಿ: ವಿವಾದಗಳಿಂದ ನೀವು ದೂರವಿರುವುದು ಒಳ್ಳೆಯದು. ಖರ್ಚುಗಳನ್ನು ನಿಭಾಯಿಸಲು ಕಲಿಯಿರಿ. ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ.
ಸಿಂಹ ರಾಶಿ: ಕೆಲಸದ ನಿಮಿತ್ತ ಪ್ರಯಾಣ ಬರುವ ಸಾಧ್ಯತೆಗಳಿವೆ. ದೂರದೂರಿನ ಪ್ರಯಾಣ ಮಾಡುವಾಗ ನಿಮ್ಮ ವಸ್ತುಗಳ ಬಗ್ಗೆ ಕಾಳಜಿವಹಿಸಿ. ಸಂಗಾತಿಯ ಜೊತೆ ಅನಗತ್ಯ ಜಗಳ ಬೇಡ.
ಕನ್ಯಾ ರಾಶಿ: ನಿಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಚಿಂತನೆ ನಡೆಸುವಿರಿ. ಹಿರಿಯರಿಂದ ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆ ಸಿಗಲಿದೆ. ಹಣಕಾಸು ವಿಷಯದಲ್ಲಿ ಜಾಗೃತಿ ಅಗತ್ಯ.
ತುಲಾ ರಾಶಿ: ನಿಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ಶುಭ ಸುದ್ದಿ ಬರಲಿದೆ. ಯೋಗ ಹಾಗೂ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ವೃಶ್ಚಿಕ ರಾಶಿ: ನೀವು ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಆದಾಯ ಇಳಿಕೆಯಾಗುವ ಸಾಧ್ಯತೆ ಹಿನ್ನಲೆ ಖರ್ಚುಗಳನ್ನು ನಿಭಾಯಿಸಿ. ಸಂಗಾತಿಯ ಜೊತೆ ಕಾಲ ಕಳೆದು, ಅವರ ಆಗು-ಹೋಗುಗಳಿಗೆ ಸ್ಪಂದಿಸಿ.
ಧನು ರಾಶಿ: ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುವ ಸಾಧ್ಯತೆ ಕಡಿಮೆಯಿರುವ ಕಾರಣ ಹೆಚ್ಚು ದುಡಿಯುವ ಮಾರ್ಗ ಅನುಸರಿಸಿ. ಕೆಲಸದಲ್ಲಿ ಅಡೆತಡೆ ಎದುರಾದರೂ ಅದನ್ನು ಸರಿಯಾಗಿ ನಿಭಾಯಿಸಿ. ಸ್ನೇಹಿತರ ಸಹಾಯಪಡೆದು ತಾಳ್ಮೆಯಿಂದ ವ್ಯವಹರಿಸಿ.
ಮಕರ ರಾಶಿ: ವಿದ್ಯಾರ್ಥಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಈ ದಿನ ಶುಭಕರವಾಗಿದೆ. ಭೂಮಿ ಹಾಗೂ ವಾಹನ ಖರೀದಿ ವಿಷಯದಲ್ಲಿ ಯೋಚಿಸುತ್ತಿರುವವರಿಗೂ ಉತ್ತಮ ಸಮಯ. ಪ್ರಗತಿಪರ ನಿಲುವುಗಳ ಬಗ್ಗೆ ಯೋಚಿಸಿ.
ಕುಂಭ ರಾಶಿ: ಆತ್ಮವಿಶ್ವಾಸದ ಕೊರತೆಯ ಮನೋಭಾವನೆಯಿಂದ ಹೊರ ಬರುವುದು ನಿಮಗೆ ಅನಿವಾರ್ಯ. ದೈಹಿಕ ಹಾಗೂ ಮಾನಸಿಕ ತೊಂದರೆಗಳ ಬಗ್ಗೆ ಚಿಂತೆ ಮಾಡಬೇಡಿ. ಕೋಪವೂ ಒಳ್ಳೆಯದಲ್ಲ.
ಮೀನ ರಾಶಿ: ಸಮಸ್ಯೆಗಳು ಎದುರಾದಾಗ ಅದನ್ನು ತಾಳ್ಮೆಯಿಂದ ನಿಭಾಯಿಸಬೇಕು. ಆತ್ಮೀಯರ ಜೊತೆ ಸಮಯ ಕಳೆಯಿರಿ. ವ್ಯಾಪಾರ ವಿಷಯದಲ್ಲಿ ಲಾಭ ಆಗಲಿದೆ.
Discussion about this post