ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತದ ಅಂತರದಿoದ ಗೆಲುವು ಸಾಧಿಸಿದ್ದ ಕುಮಟಾ ಶಾಸಕ ದಿನಕರ ಶೆಟ್ಟಿ ಇಷ್ಟು ದಿನಗಳ ಕಾಲ ಕೇಸು-ಕೋರ್ಟು ಎಂದು ಓಡಾಟ ನಡೆಸಿದ್ದು, ಇದೀಗ ಹೈಕೋರ್ಟ್ ಅವರ ಪ್ರಕರಣವನ್ನು ವಜಾ ಮಾಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ದಿನಕರ ಶೆಟ್ಟಿ ಅವರು ಬಿಜೆಪಿ ಬಿ ಪಾರಂ ಪಡೆದು ಸ್ಪರ್ಧಿಸಿದ್ದರು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಾಕಷ್ಟು ಕಡೆ ಓಡಾಟ ನಡೆಸಿದ ಅವರಿಗೆ 59,966 ಮತಗಳು ಬಿದ್ದಿದ್ದವು. ಮೂರನೇ ಬಾರಿ ಚುನಾವಣೆ ಎದುರಿಸಿದ್ದ ಅವರಿಗೆ 2023ರಲ್ಲಿ 673 ಮತಗಳ ಅಲ್ಪ ಅಂತರದಲ್ಲಿ ಗೆಲುವು ದೊರೆಯಿತು. `ದಿನಕರ ಶೆಟ್ಟಿ ಅವರ ಗೆಲುವು ಗೆಲುವಲ್ಲ’ ಎಂದು ಕೋರ್ಟಿನಲ್ಲಿ ಪ್ರಕರಣ ದಾಖಲಾಯಿತು. ಹೀಗಾಗಿ ಅವರು ಶಾಸಕರಾದರೂ ನೆಮ್ಮದಿ ಇರಲಿಲ್ಲ!
ಮತ ಎಣಿಕೆ ಅವಧಿಯಲ್ಲಿ ಜೆಡಿಎಸ್-ಬಿಜೆಪಿ ಸಮಬಲದ ಮುನ್ನಡೆ ಸಾಧಿಸಿತ್ತು. 14 ಹಾಗೂ 15ನೇ ಸುತ್ತಿನ ಎಣಿಕೆಯಲ್ಲಿ ಜೆಡಿಎಸ್ ಕೊಂಚ ಮುನ್ನಡೆ ಕಾಣಿಸಿತ್ತು. ಆ ವೇಳೆ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಿದ್ಧವಾಗಿದ್ದರು. ಆಗ, ಎರಡು ಮತ ಯಂತ್ರಗಳ ತಾಂತ್ರಿಕ ತೊಂದರೆಯಾಯಿತು. ವೋಟಿಂಗ್ ಸ್ಲಿಪ್ ಮರು ಎಣಿಕೆ ಮಾಡಬೇಕಾದ ಪ್ರಸಂಗ ಎದುರಾಗಿದ್ದು, ಇದಕ್ಕೆ ಕೊಂಚ ಸಮಯ ಹಿಡಿಯಿತು. ಮರು ಎಣಿಕೆ ನಡೆಸಿದಾಗ ದಿನಕರ ಶೆಟ್ಟಿ ಗೆಲುವು ಸಾಧಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸೂರಜ ನಾಯ್ಕ ಸೋನಿ ಅವರು ಸ್ಪರ್ಧಿಸಿದ್ದರು. ಅವರು 59293 ಮತಪಡೆದಿದ್ದು, 673 ಮತಗಳನ್ನು ಕಡಿಮೆಪಡೆದು ಸೋತಿದ್ದರು. ಈ ಹಿನ್ನಲೆ ಅವರು ದಿನಕರ ಶೆಟ್ಟಿ ಅವರ ಗೆಲುವನ್ನು ಪ್ರಶ್ನಿಸಿ ದಾವೆ ದಾಖಲಿಸಿದ್ದರು. `ಚುನಾವಣಾ ಮತ ಎಣಿಕೆಯಲ್ಲಿಯಲ್ಲಿ ಅಕ್ರಮ ನಡೆದಿದೆ’ ಎನ್ನುವುದರ ಬಗ್ಗೆ ಸೂರಜ್ ನಾಯ್ಕ ಸೋನಿ ಕಾನೂನಿನ ಹೋರಾಟ ಮಾಡಿದ್ದರು. ಇದರಿಂದ ದಿನಕರ ಶೆಟ್ಟಿ ಅವರು ಸಾಕಷ್ಟು ಓಡಾಟ ಮಾಡಿದರು.
ಹಿಂದೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಮೋಹನ ಶೆಟ್ಟಿ ವಿರುದ್ಧ ದಿನಕರ ಶೆಟ್ಟಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾಗ ಸಹ 20 ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು. ಆಗಲೂ, ಮೋಹನ ಶೆಟ್ಟಿ ಅವರು ಕೋರ್ಟಿನ ಮೊರೆ ಹೋಗಿದ್ದರು. ಆಗ ಸಹ ದಿನಕರ ಶೆಟ್ಟಿ ಕೋರ್ಟಿನಲ್ಲಿ ಪ್ರಕರಣ ಗೆದ್ದಿದ್ದರು.
Discussion about this post