ಜೊಯಿಡಾದ ಪಣಸೋಲಿಯಲ್ಲಿರುವ ಆನೆ ವಿಹಾರ ಕೇಂದ್ರದಲ್ಲಿದ್ದ ಪುಠಾಣಿ ಆನೆ ಸಾವನಪ್ಪಿದೆ. ಮೂರು ವರ್ಷ ಸಹ ಈ ಆನೆ ಬದುಕಲಿಲ್ಲ.
ಪಣಸೋಲಿ ವನ್ಯಜೀವಿ ವಲಯಲದಲ್ಲಿಯೇ ಹುಟ್ಟಿದ ಈ ಆನೆಗೆ ಗೌರಿ ಎಂದು ನಾಮಕರಣ ಮಾಡಲಾಗಿತ್ತು. ಈ ಆನೆ ಎಲ್ಲಾ ಆನೆಗಳ ಮುದ್ದಿನ ಕೂಸಾಗಿ ಕಾಡು ಅಲೆದಾಡುತ್ತಿತ್ತು. ಆದರೆ, 2.9 ವರ್ಷಗಳ ಕಾಲ ಮಾತ್ರ ಆ ಆನೆ ಜೀವಿಸಿತು.
ಕಳೆದ ಒಂದು ತಿಂಗಳ ಹಿಂದೆ ಗೌರಿ ಆನೆಗೆ ಅನಾರೋಗ್ಯ ಕಾಡಿತು. ಅನೇಕ ವೈದ್ಯರು ಬಂದು ಗೌರಿಯ ತಪಾಸಣೆ ನಡೆಸಿದರು. ಆದರೆ, ಗೌರಿಗೆ ಕಾಡುತ್ತಿರುವ ರೋಗ ಯಾವುದು? ಎಂದು ನಿಖರವಾಗಿ ಕಂಡು ಹಿಡಿಯಲು ಆಗಲಿಲ್ಲ. ದಿನದಿಂದ ದಿನಕ್ಕೆ ಗೌರಿ ಆನೆ ಸೊರಗುತ್ತಿದ್ದು, ಅರಣ್ಯ ಸಿಬ್ಬಂದಿ ಸಹ ಇದರಿಂದ ಮಂಕಾಗಿದ್ದರು.
ಪಣಸೋಲಿ ಆನೆ ಕ್ಯಾಂಪಿನಲ್ಲಿ ಅತ್ಯಂತ ಲವಲವಿಕೆಯಿಂದ ಇದ್ದ ಆನೆ ಮರಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಇತರೆ ಆನೆಗಳ ವರ್ತನೆಯಲ್ಲಿಯೂ ಬದಲಾವಣೆ ಕಾಣಿಸಿತ್ತು. ವೈದ್ಯರು ಸಹ ಚಿಕಿತ್ಸೆ ಮುಂದುವರೆಸಿ, ಆನೆಯನ್ನು ಬದುಕಿಸಿಕೊಳ್ಳುವಲ್ಲಿ ಎಲ್ಲಾ ಬಗೆಯ ಪ್ರಯತ್ನ ಮಾಡಿದ್ದರು. ಆದರೆ, ಬುಧವಾರ ಆ ಪ್ರಯತ್ನ ಯಾವುದು ಫಲ ಕೊಡಲಿಲ್ಲ.
ಸೆ 25ರ ನಸುಕಿನ ವೇಳೆಯಲ್ಲಿಯೇ ಪುಟ್ಟ ಗೌರಿ ಆನೆ ತನ್ನ ಕೊನೆ ಉಸಿರೆಳೆಯಿತು. ವೈದ್ಯರು ಬಂದು ಮರಣೋತ್ತರ ಪರೀಕ್ಷೆ ನಡೆಸಿದರು. ಗೌರಿ ಆನೆ ಹುಟ್ಟಿದ ಕಾಡಿನಲ್ಲಿಯೇ ಅದರ ಅಂತ್ಯ ಸಂಸ್ಕಾರ ನಡೆಯಿತು.
Discussion about this post