ಅಂಕೋಲಾ ಉಪನೋಂದಣಾಧಿಕಾರಿ ಕಚೇರಿಯ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ಮಾಡಿದ್ದಾರೆ. ಅಲ್ಲಿ ಸಹ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಅಂಕೋಲಾದ ನೋಂದಣಾಧಿಕಾರಿ ಕಚೇರಿಯಲ್ಲಿಯೂ ಲಂಚಾವತಾರದ ಬಗ್ಗೆ ಸಾಕಷ್ಟು ದೂರುಗಳಿದ್ದವು. ಈ ಹಿನ್ನಲೆ ದಾಳಿ ನಡೆದಿರುವ ಬಗ್ಗೆ ಅಂದಾಜಿಸಲಾಗಿದೆ. ಅಲ್ಲಿನ ಕಡತಗಳನ್ನು ಲೋಕಾಯುಕ್ತರು ತಪಾಸಣೆ ಮಾಡಿದ್ದು, ಕೆಲ ಕಾಗದಪತ್ರಗಳನ್ನು ವಶಕ್ಕೆಪಡೆದಿದ್ದಾರೆ.
ಲೋಕಾಯುಕ್ತ ಇನಸ್ಪೆಕ್ಟರ ವಿನಾಯಕ ಬಿಲ್ಲವ ಹಾಗೂ ಇನಸ್ಪೆಕ್ಟರ ವಿಜಯ ನೇತೃತ್ವದಲ್ಲಿ 7 ಜನರ ತಂಡ ದಾಳಿ ನಡೆಸಿದೆ. ಎರಡು ಗಂಟೆಗೂ ಹೆಚ್ಚು ಕಾಲ ಕಚೇರಿ ಮೂಲೆ ಮೂಲೆಯನ್ನು ಲೋಕಾಯುಕ್ತರು ತಪಾಸಣೆ ನಡೆಸಿದ್ದಾರೆ. ರಾತ್ರಿ ಅವಧಿಯಲ್ಲಿಯೂ ಕಚೇರಿಯ ದೀಪ ಬೆಳಗುತ್ತಿದ್ದು, ಕಡತಗಳ ಶೋಧ ಮುಂದುವರೆದಿದೆ.
Discussion about this post