ಹೊನ್ನಾವರದ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ರಾತ್ರಿಯಾದರೂ ಲೋಕಾಯುಕ್ತ ಅಧಿಕಾರಿಗಳು ಮನೆಗೆ ಹೋಗಿಲ್ಲ!
ಗುರುವಾರ ಸಂಜೆ 5 ಗಂಟೆ ವೇಳೆಗೆ ನೋಂದಣಾಧಿಕಾರಿ ಕಚೇರಿ ಅಧಿಕಾರಿ-ಸಿಬ್ಬಂದಿ ಮನೆಗೆ ಹೋಗುವ ಸಿದ್ಧತೆಯಲ್ಲಿದ್ದರು. ಇನ್ನೇನು ಕಚೇರಿ ಬೀಗ ಹಾಕಿ ಹೊರಡಬೇಕು ಎನ್ನುವಷ್ಟರಲ್ಲಿ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರ ಜೀಪು ಅಲ್ಲಿಗೆ ಆಗಮಿಸಿತು. ಇನ್ಸಪೆಕ್ಟರ್ ರವಿ ಹಾಗೂ ಇನ್ನಿತರ ಸಿಬ್ಬಂದಿ ನೋಂದಣಾಧಿಕಾರಿ ಕಚೇರಿ ಒಳಗೆ ಪ್ರವೇಶಿಸಿ ವಿವಿಧ ದಾಖಲೆ ಪ್ರಶ್ನಿಸಿದರು. ಲೋಕಾಯುಕ್ತರ ಆಗಮನದಿಂದ ತಬ್ಬಿಬ್ಬಾದ ಅಲ್ಲಿದ್ದ ಅಧಿಕಾರಿ-ಸಿಬ್ಬಂದಿ ಕೆಲ ಕಾಲ ತಡವರಿಸಿದರು.
ನೋಂದಣಾಧಿಕಾರಿ ಕಚೇರಿಯ ಲಂಚಾವತಾರದ ಬಗ್ಗೆ ಅನೇಕ ಆರೋಪಗಳಿದ್ದವು. ಆ ಬಗ್ಗೆಯೂ ಲೋಕಾಯುಕ್ತರು ಪರಿಶೀಲಿಸಿದರು. ಸಂಜೆ ಮನೆಗೆ ಹೋಗುವ ವೇಳೆ ಅಧಿಕಾರಿ-ಸಿಬ್ಬಂದಿ ಲೆಕ್ಕಕ್ಕೆ ಬಾರದ ಕೆಲ ಹಣ ಒಯ್ಯುತ್ತಿರುವ ಆರೋಪವಿದ್ದು, ಸಂಜೆ ಅವಧಿಯಲ್ಲಿಯೇ ಅಲ್ಲಿನವರು ಸಿಕ್ಕಿಬಿದ್ದರು.
ಹೀಗಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದರು. ನಂತರ ಸುಧಾರಿಸಿಕೊಂಡು ಕೇಳಿದ ಪ್ರಶ್ನೆಗೆ ಉತ್ತರಿಸಲು ಶುರು ಮಾಡಿದರು. ಲೋಕಾಯುಕ್ತ ಅಧಿಕಾರಿಗಳು ಅನೇಕ ದಾಖಲೆಗಳನ್ನು ತಪಾಸಣೆಗೆ ಒಳಪಡಿಸಿದರು. ರಾತ್ರಿಯವರೆಗೂ ನೋಂದಣಾಧಿಕಾರಿ ಕಚೇರಿಯಲ್ಲಿನ ಕಡತಗಳ ಪರಿಶೀಲನೆ ನಡೆಯುತ್ತಿದೆ.
Discussion about this post