ಮರ ಕಡಿಯುವಾಗ ನೆಲಕ್ಕೆ ಬಿದ್ದು ಚಿಕಿತ್ಸೆಪಡೆದಿದ್ದ ಕುಮಟಾದ ಜಗದೀಶ ಗೌಡ ಅವರು ಮನೆಗೆ ಮರಳಿದ್ದು, ಅದಾಗಿ ಐದು ದಿನಗಳ ನಂತರ ನೋವಿನಿಂದ ನರಳಿ ಸಾವನಪ್ಪಿದ್ದಾರೆ.
ಕುಮಟಾ ಬಾವಿಕೊಡ್ಲದ ಹಾರುಮಾಸ್ಕೇರಿಯಲ್ಲಿ ಜಗದೀಶ ಗೌಡ (48) ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಮನೆ ಬಳಿಯಿರುವ ತೆಂಗಿನ ಗಿಡಕ್ಕೆ ಗೊಬ್ಬರಕ್ಕಾಗಿ ಅವರು ಮಾವಿನ ಮರ ಹತ್ತಿದ್ದರು. ಸೆ 18ರಂದು ಮಾವಿನ ಮರದ ಟೊಂಗೆ ಕತ್ತರಿಸುವಾಗ ಅವರು ಕಾಲು ಜಾರಿ ನೆಲಕ್ಕೆ ಬಿದ್ದರು. ಪರಿಣಾಮ ಅವರ ಬಲ ಭಾಗದ ಕೈಗೆ ಪೆಟ್ಟಾಗಿತ್ತು.
ಅದೇ ದಿನ ಆಸ್ಪತ್ರೆಗೆ ಹೋದ ಜಗದೀಶ ಗೌಡ ಅವರು ಚಿಕಿತ್ಸೆಪಡೆದು ಮನೆಗೆ ಮರಳಿದ್ದರು. ಅಧಿಕ ಪ್ರಮಾಣದಲ್ಲಿ ನೋವಿದ್ದ ಕಾರಣ ಅವರು ವಿಶ್ರಾಂತಿಪಡೆಯುತ್ತದ್ದರು. ಐದು ದಿನಗಳ ಕಾಲ ಅವರ ನೋವು ಇನ್ನಷ್ಟು ಉಲ್ಬಣವಾಗಿದ್ದು, ಆರೋಗ್ಯದಲ್ಲಿಯೂ ಏರುಪೇರಾಯಿತು.
ಸೆ 23ರಂದು ರಾತ್ರಿ ಅವರು ಸಾವನಪ್ಪಿದರು. ಅವರ ತಮ್ಮ ತಿಮ್ಮಣ್ಣ ಗೌಡ ಅವರು ಈ ಬಗ್ಗೆ ಗೋಕರ್ಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post