4 ಲಕ್ಷ ರೂ ಮೌಲ್ಯದ ಬಂಗಾರಧರಿಸಿ ಶಿರಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಪದ್ಮಾವತಿ ಅಂಬಿಗ ಅವರ ಸರ ಕಳ್ಳತನವಾಗಿದೆ. `ಬೆಲೆ ಬಾಳುವ ಒಡವೆ ಹಾಕಿಕೊಂಡು ಓಡಾಡಬೇಡಿ’ ಎಂದು ಸಾಕಷ್ಟು ಬಾರಿ ಪೊಲೀಸರು ಅರಿವು ಮೂಡಿಸಿದರೂ ಆ ಮಾತು ಕೇಳಿಸಿಕೊಳ್ಳದ ಕಾರಣ ಅವರು ಪಶ್ಚಾತಾಪಪಡುತ್ತಿದ್ದಾರೆ.
ಶಿರಸಿ ಮಂಜಗುಣಿ ಬಳಿಯ ತೆಪ್ಪಾರ ಕಸಿಗೆಯ ಪದ್ಮಾವತಿ ಈಶ್ವರ ಅಂಬಿಗ ಅವರು ಅಗಸ್ಟ 24ರಂದು ಶಿರಸಿಗೆ ಬಂದಿದ್ದರು. ತಮ್ಮ ಬಳಗದ ಗೌರಿ ತಿಮ್ಮಣ್ಣ ಅಂಬಿಗ, ರಾಧಾ ಹನುಮಂತ ಅಂಬಿಗ, ನಾಗವೇಣಿ ಶಂಕರ ಅಂಬಿಗ, ಸುಮಿತ್ರಾ ಗಣಪತಿ ಅಂಬಿಗ ಅವರ ಜೊತೆ ಪದ್ಮಾವತಿ ಈಶ್ವರ ಅಂಬಿಗ ಅವರು ಬನವಾಸಿ ರಸ್ತೆಯ ಶ್ರೀಷಾ ಕಾಂಪ್ಲೇಕಿನ ಬಳಿ ಹೋಗಿದ್ದರು. ಅವರೆಲ್ಲರೂ ಸೇರಿ ಅಲ್ಲಿ ಸಂಘದ ಸಭೆ ನಡೆಸಿದ್ದರು.
ಪುಣ್ಯಕೋಟಿ ಮೀನುಗಾರ ಸಂಘದ ಸಭೆ ಮುಗಿಸಿ ಮಧ್ಯಾಹ್ನ 3.20ಕ್ಕೆ ಪದ್ಮಾವತಿ ಈಶ್ವರ ಅಂಬಿಗ ಅವರು ಮನೆಗೆ ಮರಳುವವರಿದ್ದರು. ಇದಕ್ಕಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ದೇವಿಮನೆ ಬಸ್ಸು ಬಂದಾಗ ಪದ್ಮಾವತಿ ಈಶ್ವರ ಅಂಬಿಗ ಅವರು ಬಸ್ಸು ಹತ್ತಿದರು. ಆಗ ಅವರ ಕೊರಳಿನಲ್ಲಿದ್ದ ಮಾಂಗಲ್ಯದ ಸರ ಕಾಣದಿರುವುದು ಗಮನಕ್ಕೆ ಬಂದಿತು. ಕೂಡಲೇ ಬಸ್ಸಿನಿಂದ ಇಳಿದು ಎಲ್ಲಾ ಕಡೆ ಹುಡುಕಾಡಿದರು. ಬಸ್ ನಿಲ್ದಾಣವನ್ನು ಸುತ್ತು ಹಾಕಿದರು. ಬಸ್ಸಿನ ಮೆಟ್ಟಿಲು ಹಾಗೂ ಕುಳಿತ ಆಸನದ ಜಾಗವನ್ನು ನೋಡಿದರು.
ಎಲ್ಲಿ ನೋಡಿದರೂ ಅವರ ಬಂಗಾರದ ಮಾಂಗಲ್ಯ ಸರ ಸಿಗಲಿಲ್ಲ. 4 ಲಕ್ಷ ರೂ ಮೌಲ್ಯದ ಸರ ಕಾಣೆಯಾದ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಇದೀಗ ಸರ ಹುಡುಕಾಟದಲ್ಲಿದ್ದಾರೆ.
Discussion about this post