ಕಾರವಾರ:
ರಾಜ್ಯ ಕಾಂಗ್ರೆಸ್ ಸರಕಾರವು ರೈತ ವಿರೋಧಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಗುರುವಾರ ಜಿಲ್ಲಾ ಬಿಜೆಪಿಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿಯ ಬಳಿ ಜಮಾವಣೆಗೊಂಡ 100ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ವಿರುದ್ಧ ಘೋಷನೆ ಕೂಗಿದರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಯಖ್ಯಮಂತ್ರಿಗಳ ಬ್ರೇಕ್ ಫಾಸ್ಟ್ ನಾಟಕ ನಿಲ್ಲಿಸಿ ಎಂದು ವ್ಯಂಗ್ಯವಾಡಿದರು. ಕುರ್ಚಿ ಕದನದ ಬದಲು ಅನ್ನ ನೀಡುವ ರೈತರ ಸಮಸ್ಯೆ ಆಲಿಸಲಿ ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರಕಾರದಲ್ಲಿ ಇರುವ ಜನಪ್ರತಿನಿದಿಗಳು ತಮ್ಮ ಕುರ್ಚಿ ಬಲಪಡಿಸಿಕೊಳ್ಳಲು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಿಂದಿನ ಸರಕಾರದ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ತಂದ ವಿದ್ಯಾನಿಧಿ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಾಂಗರೆಸ್ ಸರಕಾರ ಬಂದ್ ಮಾಡಿದೆ. ಮಳೆಯಿಂದ ಬೆಳೆ ಹಾನಿಯಾದ ರೈತರನ್ನು ಜನಪ್ರಿನಿಧಿಗಳು ಮಾತನಾಡಿಸುತ್ತಿಲ್ಲ. ಮೆಕ್ಕೆಜೋಳ, ಭತ್ತ, ಕಬ್ಬು ಅಡಿಕೆ, ಹೈನುಗಾರಿಕೆ, ತೋಗಾರಿಕೆ ಹಾಗು ಮೀನುಗಾರಿಕೆ ವಲಯದಲ್ಲಿ ಸರಿಯಾದ ಸಮೀಕ್ಷೆಯಾಗಿಲ್ಲ. ಇದೀಗ ಡಿಕೆ ಶಿವಕುಮಾರ ಅವರಿಗೆ ಮೋಸ ಮಾಡಲು ಬ್ರೇಕ್ ಫಾಸ್ಟ್ ನಾಟಕ ಮಾಡುವುದು ಬಿಟ್ಟು ರೈತರಿಗೆ ಶೇ.ಒ ರಷದಟು ಬಡ್ಡಿಯಲ್ಲಿ ರೈತರಿಗೆ ಸಾಲ, ಪರಿಹಾರ ನೀಡಬೇಕು. ಅದನ್ನು ಬಿಟ್ಟು ಬಿಜೆಪಿ ಸರಕಾರ ತಂದ ಹಣದಲ್ಲಿ ಕಾಮಗಾರಿ ಮಾಡುವುದು ಬೇಡ ಎಂದರು.
ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ, ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಅಂಕೋಲಾ ಪುರಸಭೆಯ ಅಧ್ಯಕ್ಷ ಸುರಜ ನಾಯ್ಕ, ಜಗದೀಶ ನಾಯ್ಕ ಮೊಗಟಾ, ಸುಭಾಷ ಗುನಗಿ, ಗಜಾನನ ಗುನಗ, ಸಂಜಯ ಸಾಳುಂಕೆ, ಸಯನೀಲ ಸೋನಿ, ರಾಘವೇಂದ್ರ ಭಟ್, ಕಾರವಾರ ಹಾಗೂ ಅಂಕೋಲಾದ ಎಲ್ಲಾ ಕಾರ್ಯಕರ್ತರು ರೈತ ಮೋರ್ಚಾ ಅಧ್ಯಕ್ಷರು ಇದ್ದರು.
