ಕಾರವಾರ:
ಕಾರವಾರ ಸಮೀಪದ ಕದಂಬ ನೌಕಾನೆಲೆ ವಸತಿ ಗೃಹಗಳ ಸನಿಹ ಮಂಗಳವಾರ ಮಧ್ಯಾಹ್ನ ಚಿರತೆ ಸಂಚರಿಸಿರುವುದು ವರದಿಯಾಗಿದೆ. ವಸತಿ ಗೃಹದ ಹತ್ತಿರ ಚಿರತೆ ಓಡಾಡುತ್ತಿರುವ ದೃಶ್ಯ ಸ್ಥಳೀಯರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಹರಿದಾಡುತ್ತಿದೆ.
ಈ ಮೊದಲು ಕೂಡ ನೌಕಾನೆಲೆ ಪ್ರದೇಶದಲ್ಲಿ ರಾತ್ರಿ ಹೊತ್ತು ಚಿರತೆ ಕಾಣಿಸಿಕೊಂಡ ಘಟನೆಗಳು ನಡೆದಿದೆ. ಇಂದು ಮದ್ಯಾಹ್ನ ಆಹಾರಕ್ಕಾಗಿ ಹುಡುಕಾಟ ನಡೆಸಿದಂತೆ ಚಿರತೆ ವಸತಿ ಗೃಹಗಳತ್ತ ಬಂದಿರುವುದು ನಿವಾಸಿಗಳಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಘಟನೆಯ ಬಗ್ಗೆ ಅರಿವು ಪಡೆದ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನಿಗಾ ಹೆಚ್ಚಿಸಿದ್ದು, ಸ್ಥಳೀಯರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
