ಕಾರವಾರ:
ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.11 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರವಾರದಲ್ಲಿ ಕರಾವಳಿ ಉತ್ಸವವು ಡಿ. 22 ರಿಂದ 28 ರವರೆಗೆ 7 ದಿನಗಳವರೆಗೆ೩ ಹಮ್ಮಿಕೊಳ್ಳಲಾಗಿದೆ. ಆಸಕ್ತ ಕಲಾವಿದರು ಡಿ. 11 ರೊಳಗೆ ತಮ್ಮ ಕಾರ್ಯಕ್ರಮ ನೀಡಿದ ದಾಖಲೆಗಳನ್ನು ಲಗತ್ತಿಸಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇ ಮೇಲ್ ವಿಳಾಸ dkc.karwar@gmali.com ಗೆ ಕಳಿಸಬಹುದು.
ಕಲಾವಿದರಿಗೆ ಡಿ. 13 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 4 ಗಂಟೆಯವರೆಗೆ ಇಲ್ಲಿನ ಸಾಮಾಜಿಕ ಅರಣ್ಯ ವಿಭಾಗದ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕರಾವಳಿ ಉತ್ಸವ ವೇದಿಕೆಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
