ಕಾರವಾರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬರುವುದಾದರೆ ಜಿಲ್ಲಾಸ್ಪತ್ರೆಗೆ ಎಂಆರ್ ಯಂತ್ರ, ವೈದ್ಯರ ನೇಮಕಾತಿ, ಮೂಲ ಸೌಕರ್ಯ ಒದಗಿಸಬೇಕು, ಅಥವಾ ಅಧಿವೇಶನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿ ಮಾಡಿ ಬರಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ 150 ಕೋಟಿ ಹಣ ಮಂಜೂರಿ ಮಾಡಿದ್ದರು. ಆದರೆ ಕಾಂಗ್ರೆಸಿನ ವಕ್ತಾರರು ಸೂಕ್ತ ದಾಖಲೆ ನೀಡದೇ ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚಿನ ಅನುಧಾನ ಬಂದಿದೆ ಎಂದು ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿಯ ಅವಧಿಯಲ್ಲಿ ಮಂಜೂರಿಯಾದ ಆಸ್ಪತ್ರೆಯನ್ನು ಉದ್ಘಾಟನೆ ಮಾಡುವುದುದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಮೂಲ ಸೌಕರ್ಯ ಹಾಗು ವೈದ್ಯರನ್ನು ಒದಗಿಸಬೇಕು. ಶೀಘ್ರವೇ ಎಂಆರ್ಐ ಹಾಗೂ ಡಯಾಲಿಸೀಸ್ ಯಂತ್ರ ನೀಡಬೇಕು. ಇಲ್ಲವಾದರೆ ಅಧಿವೇಶನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಿಯೇ ಬರಬೇಕು ಎಂದರು.
ಕಾರವಾರದ ಶಾಸಕ ಸತೀಶ ಸೈಲ್ ಅವರು ಒಂದಲ್ಲ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರುತ್ತೇವೆ ಎಂದಿದ್ದರು. ಆದರೆ ಆಗಿರುವ ಆಪತ್ರೆಗೆ ಒಂದು ಯಂತ್ರ ಕೂಡ ತಂದಿಲ್ಲ. ತಾವೇ ಕೆಲಸ ಮಾಡಿದ್ದೇವೆ ಎನ್ನುವ ಅವರು ತಮ್ಮ ಅವಧಿಯಲ್ಲಿ ಬಿಡುಗಡೆಯಾದ ಹಣದ ಬಗ್ಗೆ ಸುತ್ತೋಲೆ ನೀಡಲಿ. ಅರದ ಬದಲಾಗಿ ಸುಳ್ಳಿ ಹೇಳಿ ಕಣ್ಣು ವರೆಸುವುದು ಬೇಡ ಎಂದರು. ಕೇಣಿ ಬಂದರು ಯೋಜನೆಯನ್ನು ವಿರೋಧಿಸಿ ಅಲ್ಲಿನ ಜನರು ಹೋರಾಟ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯ ಕಾಂಗ್ರೆಸಿನ ಓರ್ವ ಜನಪ್ರತಿನಿಧಿ ಕೂಡ ಅವರ ಅಳಲು ಕೇಳಿಲ್ಲ. ಗ್ಯಾರಂಟಿ ಬೇಡ ಎಂದು ಮುಚ್ಚಳಿಕೆ ಬರೆದುಕೊಡಲು ಕಾಂಗ್ರಸಿನ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಹೇಳಿದ್ದಾರೆ. ಹಾಗಾದರೆ ಕೇಂದ್ರದ ಬಿಜೆಪಿ ಸರಕಾರವು ನೀಡುವ ಯೋಜನೆಗಳನ್ನು ನೀವೇಕೆ ಪಡೆಯುತ್ತೀರಿ ಎಂದು ಪ್ರಶ್ನಿಸಿದರು. ಹಾಲಕ್ಕಿ ಸಮುದಾಯದ ಅಭಿವೃದ್ಧಿಗೆ ಬಂದ ಹಣವನ್ನು ಪಿಡಬ್ಲೂಡಿ ಇಲಾಖೆಯಿಂದ ಕಾಮಗಾರಿ ಬದಲಿಸಲು ಪ್ರಯತ್ನಿಸಿದ್ದರು. ಕಾಳಿ ಸೇತುವೆ ಅವಶೇಷಗಳನ್ನು ಕಾಂಡ್ಳಾ ಗಿಡಗಳನ್ನು ಕಡಿದು ಸಮತಟ್ಟು ಮಾಡಲು ಉಪಯೋಗಿಸಿಕೊಂಡಿದ್ದಾರೆ ಇವುಗಳ ಕುರಿತು ತನಿಖೆ ನಡೆಯಬೇಕು ಎಂದರು.
ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿಯೂ ಸರಿಯಾದ ವೈದ್ಯರಿಲ್ಲ. ಹೆರಿಗೆ, ಮೂಳೆ ತಜ್ಞ ಸೇರಿದಂತೆ ನುರಿತ ವೈದ್ಯರಿಲ್ಲ. ಔಷಧಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಆಸ್ಪತ್ರೆ ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳೇ ಕುಂದಿವೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿಯ ಕಾರ್ಯಕಾರಣಿ ಸಮಿತಿಯ ಸದಸ್ಯ ಕೆ.ಜಿ ನಾಯ್ಕ, ಕಾರವಾರ ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಗ್ರಾಮೀಣ ಮಂಡಲದ ಸುಭಾಷ ಗುನಗಿ, ನಾಗೇಶ ಕುರಡೇಕರ ಹಾಗೂ ಕಾರ್ಯಕರ್ತರು ಇದ್ದರು.
