ಜೋಯಿಡಾ:
ತಾಲೂಕಿನ ಪಣಸೋಲಿ–ಕುಳಗಿ ರಸ್ತೆಯ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಪಣಸೋಲಿಯ ಆನೆ ಶಿಬಿರಕ್ಕೆ ತೆರಳಿ ಹಿಂತಿರುಗುತ್ತಿದ್ದ ಪ್ರವಾಸಿಗರ ಎದುರು ಅಚಾನಕ್ ಚಿರತೆ ಕಾಣಿಸಿಕೊಂಡಿದ್ದು, ಕೆಲ ಕ್ಷಣಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಚಿರತೆ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿರುವ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಫೋನ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಭಾಗದಲ್ಲಿ ಚಿರತೆಯ ವಿಹಾರ ಸಾಮಾನ್ಯವಾಗಿದ್ದು ಪ್ರವಾಸಿಗರು ಗಲಾಟೆ ಮಾಡದೇ ಪ್ರಯಾಣಿಸಬೇಕು. ವಾಹನದಿಂದ ಇಳಿದು ಚಿತ್ರೀಕರಿಸುವ ಸಾಹಸ ಮಾಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
