ದಾಂಡೇಲಿ :
ನಗರದ ಹಳೆ ನಗರಸಭೆಯ ಮೈದಾನದಲ್ಲಿ ನಡೆಯುತ್ತಿರುವ ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಕವಿ ಕಾವ್ಯ ಸಮಯ ಶಿರ್ಷಿಕೆಯಡಿ ನಡೆದ ಕವಿಗೋಷ್ಠಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರೋಹಿದಾಸ ನಾಯಕ ಅವರ ಉಪಸ್ಥಿತಿಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಕವಿಗಳಾದ ಶರೀಫ್ ಹಾರ್ಸಿಕಟ್ಟಾ, ರಾಮಮೂರ್ತಿ ನಾಯಕ, ಮಂಜುನಾಥ ಯಲ್ವಡಿಕವೂರ, ಸುನಂದಾ ಪುರಾಣಿಕ, ಸುಬ್ರಹ್ಮಣ್ಯ ಹೆಗಡೆ, ಗಣಪತಿ ಹೆಗಡೆ, ಶಂಕರ ಗೌಡ ಗುಣವಂತೆ, ಕದಂಬ ರತ್ನಾಕರ, ಯಮುನಾ ಗಾಂವಕರ, ಡಾ.ಎಸ್.ಎಸ್.ದೊಡಮನಿ, ಟಿ.ಕೆ.ಎಂ ಅಜಾದ್, ನರೇಶ ನಾಯ್ಕ, ಜಿ.ಆರ್.ತಾಂಡೇಲ, ಪ್ರಶಾಂತ ಪಟಗಾರ, ವಿಜಯಾ ಗಣಪತಿ ಶೆಟ್ಟಿ, ಸಾವಿತ್ರಿ ಮಾಸ್ಕೇರಿ, ಭವ್ಯ ಹಳೆಯೂರು, ಅರುಣ್ ಕೊಪ್ಪ, ಶಿವಾಜಿ ಚೋಮಣ್ಣವರ, ದೀಪಾಲಿ ಸಾಮಂತ, ಅಶ್ಬಿನಿ ಸಂತೋಷ ಶೆಟ್ಟಿ, ನಿರಂಜನ ವಂದಿಗೆ, ಲಕ್ಷ್ಮೀ ಎಚ್ ಮತ್ತು ಪಾಂಡುರಂಗ ಟಿಕ್ಕೋಜಿ ಅವರು ತಮ್ಮ ತಮ್ಮ ಕವಿತೆಗಳನ್ನು ವಾಚಿಸಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲೇಖಕರಾದ ಅಂಕೋಲಾದ ಫಾಲ್ಗುಣ ಗೌಡ ಅವರು ಕವಿತೆ ಅಂದರೆ ಅದನ್ನು ದಾಟಿಸುವ ಕ್ರಿಯೆ. ನಮ್ಮ ಭಾವನೆಗಳನ್ನು ಮತ್ತು ಅನುಭವಗಳನ್ನು ವ್ಯಕ್ತಪಡಿಸುವ ಮಹತ್ವದ ವೇದಿಕೆ ಕವಿತೆಯಾಗಿದೆ. ಭಾವನೆಗಳನ್ನು ಮತ್ತು ಅನುಭವಗಳನ್ನು ದಾಟಿಸುವ ಕ್ರಿಯೆ ಅತ್ಯಂತ ಮಹತ್ವಪೂರ್ಣವಾಗಿದೆ. ಜನರಿಗೆ ಜಾಗೃತಿ ಮೂಡಿಸುವ ಸಂದೇಶಗಳು ಕವಿತೆಯಲ್ಲಿ ಅಡಕವಾಗಬೇಕು. ಕವಿತೆಯನ್ನು ಓದುವ ರೀತಿಯಲ್ಲಿ ಓದಿದಾಗ ಮಾತ್ರ ಕವಿತೆಯನ್ನು ಅರಿಯಲು ಮತ್ತು ಕವಿತೆಗೆ ನಿಜವಾದ ಅರ್ಥ ಬರಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಕವಿಗಳಿಗೆ ಹಾಗೂ ಗೊಷ್ಟಿಯ ಅಧ್ಯಕ್ಷರಿಗೆ ಜಿಲ್ಲಾ ಕಸಾಪ ವತಿಯಿಂದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಹಾಗೂ ಕಾರ್ಯದರ್ಶಿ ಪಿ. ಆರ್.ನಾಯ್ಕ ಅವರು ಸನ್ಮಾನಿಸಿದರು.
ಗಂಗಾಧರ ನಾಯ್ಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಪಾಂಡುರಂಗ ಪಟಗಾರ ವಂದಿಸಿದರು. ಆಶಾ ದೇಶಭಂಡಾರಿ ಮತ್ತು ವಿನಾಯಕ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.
