ಕಾರವಾರ :
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಹಶಿಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಇದೀಗ ಕಾರವಾರ ತಹಶಿಲ್ದಾರ್ ಕಚೇರಿಗೂ ಇದೇ ಮಾದರಿಯಲ್ಲಿ ಹುಸಿ ಬಾಂಬ್ ಬೆದರಿಕೆ ಹಾಕಲಾದ ಇಮೇಲ್ ಸಂದೇಶ ಕಳುಹಿಸಲಾಗಿದೆ.
ಭಟ್ಕಳ ತಹಶಿಲ್ದಾರ್ ಕಚೇರಿಗೆ ಗೆ ಕಳುಹಿಸಿದ್ದ ಸಂದೇಶವನ್ನೇ ಯತಾವತ್ತಾಗಿ ಕಾರವಾರದ ತಹಶೀಲ್ದಾರ್ ಕಚೇರಿಗೆ ರವಾನೆ ಮಾಡಲಾಗಿದೆ.
ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಮೇಲುನೋಟಕ್ಕೆ ತಿಳಿಯುತ್ತದೆ. ಆದರೂ ಈ ವಿಷಯವನ್ನು ತಹಶಿಲ್ದಾರ್ ನರೋನಾ ರವರು ಕಾರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯಾವುದೋ ಮಾನಸಿಕ ಕಾಯಿಲೆ ಇರುವ ವ್ಯಕ್ತಿ ಇ-ಮೇಲ್ ಮಾಡಿರುವ ಸಾಧ್ಯತೆಗಳಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ.
ಇನ್ನು ಭಟ್ಕಳ,ಕಾರವಾರ (karwar)ತಹಶಿಲ್ದಾರ್ ಕಚೇರಿಗಲ್ಲದೇ ಉತ್ತರ ಕನ್ನಡ ಜಿಲ್ಲೆಯ ಬೇರೆ ಯಾವ ಕಚೇರಿಗಳಿಗೆ ಇ-ಮೇಲ್ ಬೆದರಿಕೆ ಬಂದಿರಬಹುದು ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಒಂದೇ ದಿನ ಎರಡು ಇಮೇಲ್ ಬೆದರಿಕೆ ಸಂದೇಶ ಬಂದಿದೆ. ಇನ್ನು ಈ ಹಿಂದೆ ಭಟ್ಕಳ ಶಹರ ಠಾಣೆಗೂ ಎರಡು ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು ಇಬ್ಬರನ್ನು ಬಂಧನ ಮಾಡಲಾಗಿತ್ತು.
ಆದರೇ ಮತ್ತೆ ಮತ್ತೆ ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿಯನ್ನೇ ಟಾರ್ಗೆಟ್ ಮಾಡುತ್ತಿರುವು ಏಕೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
