ದಾಂಡೇಲಿ:
ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗ, ಮಂಗಳೂರು ರವರ ನಿರ್ದೇಶನ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ . ಕಾರವಾರ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಮಾರ್ಗದರ್ಶನದಲ್ಲಿ ಸೋಮವಾರ ರಂದು ಮಧ್ಯಾನ 1.45 ಗಂಟೆ ಸಮಯದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಟಿ.ಬಿ.ಮಲ್ಲನ್ನವರ ಅವರು ಹಾಗೂ ಸಿಬ್ಬಂದಿಗಳಾದ ಸಂತೋಷ ಸುಬ್ಬಣ್ಣನವರ, ವಿಕ್ರಮ ಬಿಡಿಕರ್, ಈರಣ್ಣ ಗಾಳಿ ಮತ್ತು ಎಂ. ಏಚ್.ಆನವಟ್ಟಿ ರವರು ಅನಮೊಡ ತನಿಖಾ ಠಾಣೆ ಯಲ್ಲಿ ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುವ ವೇಳೆ ಈಚರ ಕಂಪೆನಿಯ ಪ್ರೊ 2095 ಮಿನಿ ಲಾರಿಯಲ್ಲಿ 18.78 ಮಿ.ಲಿಯ ಗೋವಾ ರಾಜ್ಯದ ಮದ್ಯ ಪತ್ತೆಯಾಗಿದ್ದು ದೊರೆತ ಮದ್ಯ ಹಾಗೂ ಒಂದು ಮಿನಿ ಲಾರಿ ವಾಹನವನ್ನು ಜಫ್ತುಪಡಿಸಿಕೊಂಡು ಅಬಕಾರಿ ಉಪ ನಿರೀಕ್ಷಕರು ದಾಂಡೇಲಿ ವಲಯ ರವರಿಗೆ ಮುದ್ದೆಮಾಲು, ಒಂದು ಮಿನಿ ಲಾರಿ ವಾಹನ ಹಾಗೂ ಆರೋಪಿಯನ್ನು ಹಸ್ತಾಂತರಿಸಲಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕರಾದ ಟಿ.ಬಿ.ಮಲ್ಲನ್ನವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
