ಹಳಿಯಾಳ :
ಪಟ್ಟಣದಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತಯ ಉಂಟಾಗಲಿದೆ.
ಪಟ್ಟಣ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಲ್ಲಿ 110/11 ಕೆ ವಿ( ಅಲ್ಲೊಳ್ಳಿ, ಕಾವಲವಾಡ) ವಿದ್ಯುತ್ ವಿತರಣಾ ಉಪ ಕೇಂದ್ರಗಳಲ್ಲಿ ವಿದ್ಯುತ್ ತುರ್ತು ನಿರ್ವಹಣಾ ಕೆಲಸ ಪ್ರಗತಿಯಲ್ಲಿರುವ ಕಾರಣ ಗುರುವಾರ, ಮತ್ತು ಶುಕ್ರವಾರ, ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತಯ ವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಎನ್ ನಾಯಕ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಗುರುವಾರ ವಿದ್ಯುತ್ ವ್ಯತಯ ವಾಗಲಿರುವ ಪ್ರದೇಶಗಳಾದ ಮರ್ಕವಾಡ , ಕಾವಲ್ವಾಡ, ಬೆಳವಟಗಿ, ಜನಗ, ಮತ್ತು ತಟ್ಟಿಗೇರ ಗ್ರಾಮ ಪಂಚಾಯಿತಿಗಳಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜುನಲ್ಲಿ ವ್ಯತಯವಾಗಲಿದೆ.
ಶುಕ್ರವಾರ ಹಳಿಯಾಳ ಪಟ್ಟಣ, ಯಡೋಗ , ಮೊದಲ್ಗೆರ , ಚಿಬ್ಬಲ್ಗೇರಿ, ಕೆಸರೋಳ್ಳಿ, ಗುಂಡೊಳ್ಳಿ ಸಾ೦ಮ್ರಾಣಿ ಭಾಗವತಿ ನಾಗಶೆಟ್ಟಿಕೊಪ್ಪ , ಹವಗಿ, ತತ್ವಣಗಿ ಬಿಕೆಹಳ್ಳಿ , ಮಂಗಳವಾಡ ತೆರೆಗಾ೦ವ್ , ಅರಲ್ವಾಡ್ ಮತ್ತು ಮದ್ನಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ . ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ, ಮತ್ತು ನಿಗದಿ ಅವಧಿಕ್ಕಿಂತ ಪೂರ್ವದಲ್ಲಿ ನಿರ್ವಹಣಾ ಕೆಲಸ ಮುಗಿದಲ್ಲಿ ವಿದ್ಯುತ್ ಮಾರ್ಗವನ್ನು ಚಾಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
