ಕಾರವಾರ:
ಗೋವಾದ ತಲ್ಪೋಣಾ ಠಾಣೆ ವ್ಯಾಪ್ತಿಯ ಮೀನುಗಾರಿಕೆ ಬೋಟೊಂದು ಕಾಣೆಯಾದ ಹಿನ್ನಲೆ ಹೆಲಿಕಾಪ್ಟರ್ ಮೂಲಕ ಪತ್ತೆ ಹಚ್ಚಿ ರಕ್ಷಣೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ತಲ್ಪೋಣಾದ ವ್ಯಾಪ್ತಿಯ ವೇತಾಳ್ ಹೆಸರಿನ ದೋಣಿಯಲ್ಲಿ ನಾಲ್ಕು ಮೀನುಗಾರರು ಸೋಮವಾರ ಮೀನುಗಾರಿಕೆಗೆ ತೆರಳಿದ್ದರು. ಕರ್ನಾಟಕದ ವ್ಯಾಪ್ತಿಗೆ ಬಂದಾಗ ಎಂಜಿನ್ ಬಂದ್ ಮಾಡಿದ್ದಾರೆ. ಈ ವೇಳೆ ಸಮುದ್ರದ ಅಲೆಗಳಿಂದ ಆಳಸಮುದ್ರಕ್ಕೆ ಹೋಗಿದ್ದು ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ. ದೋಣಿಯು ಮಂಗಳವಾರವೂ ಹಿಂದಿರುಗದ ಕಾರಣ ತಲ್ಪೋಣಾದ ಕರಾವಳಿ ಕಾವಲು ಪೊಲೀಸ್ ಠಾಣೆಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಮಂಗಳವಾರ ಕಾರವಾರ ಹಾಗೂ ಅಂಕೋಲಾದ ಠಾಣೆಗೂ ಮಾಹಿತಿ ನೀಡಿದ್ದು, ಕಾಣೆಯಾದ ಬೋಟ್ ಕಂಡುಬಂದಲ್ಲಿ ಮಾಹಿತಿ ನೀಡಿವಂತೆ ತಿಳಿಸಿದ್ದರು. ಅಲ್ಲದೇ ಮಂಗಳವಾರ ಸಂಜೆ ಕೋಸ್ಟ್ ಗಾರ್ಡ್ ಸಹಾಯದಿಂದ ಹೆಲಿಕಾಪ್ಟರ್ ಮೂಲಕ ಬಂದ ಗೋವಾದ ಕರಾವಳಿ ಕಾವಲು ಪೊಲೀಸರು ಅಂಕೋಲಾದ ಬೆಳಂಬಾರ ಕಡಲತೀರದಲ್ಲಿ ಹುಡುಕಾಟ ನಡೆಸಿದ್ದಾರೆ. ಬಳಿಕ ಆಳ ಸಮುದ್ರದಲ್ಲಿ ದೋಣಿಯನ್ನು ಪತ್ತೆ ಮಾಡಿದ್ದು ತಲ್ಪೋಣಕ್ಕೆ ವಾಪಸ್ ಕರೆತಂದಿದ್ದಾರೆ.
