ಹೊನ್ನಾವರ:
ಇಲ್ಲಿನ ಮಂಕಿ ಕಡಲ ತೀರದಲ್ಲಿ ಗುರುವಾರ ಸಂಜೆ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿದ ಹಿನ್ನಲೆ ನೀರಿನಲ್ಲಿ ಮುಳುಗಿ ಇಬ್ಬರು ಮೀನುಗಾರರು ಮೃತಪಟ್ಟಿದ್ದಾರೆ.
ಹೊನ್ನಾವರ ಮೂಲಕ ಮದನ್ ನಾರಾಯಣ ಖಾರ್ವಿ (17) ಮತ್ತು ಸುಜನ್ ನಾರಾಯಣ ಖಾರ್ವಿ (15) ಮೃತರು. ಸಮುದ್ರದಲ್ಲಿ ಭೀಕರ ಅಲೆಗಳು ಸೃಷ್ಠಿಯಾದ ಹಿನ್ನಲೆ ಪಾತಿ ದೋಣಿಯು ನಿಯಂತ್ರಣಕ್ಕೆ ಸಿಗದೇ ಮಗುಚಿದ ಹಿನ್ನೆಲೆ ಮೀನುಗಾರರು ನೀರಿನಲ್ಲಿ ಮುಳುಗಿದ್ದಾರೆ. ಕೆಲಸ ಸಮಯ ಮೃತ ದೇಹಗಳು ಸಿಗದೇ ಸ್ಥಳೀಯರು ಕಂಗಾಲಾಗಿದ್ದು. ಬಳಿಕ ಸ್ಥಳೀಯರು ಹಾಗೂ ಜೀವ ರಕ್ಷಕ ಸಿಬ್ಬಂದಿಯ ಕಾರ್ಯಾಚರಣೆಯಿಂದ ಮೃತದೇಹ ಪತ್ತೆ ಮಾಡಲಾಗಿದೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
