ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಜನರ ಬಹುದೊಡ್ಡ ಬೇಡಿಕೆಯಾಗಿದ್ದ ಕರಾವಳಿ ಉತ್ಸವ ನಾಳೆಯಿಂದ ಆರಂಭವಾಗಲಿದೆ ಎಂದು ರಾಜ್ಯ ಸರಕಾರದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದ್ದಾರೆ.
ಕರಾವಳಿ ಉತ್ಸವದ ಕುರಿತು ವೀಡಿಯೋ ತುಣುಕು ಬಿಡುಗಡೆ ಮಾಡಿರುವ ಅವರು, ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿ, ಕಲೆ ಹಾಗೂ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರವು ಕರಾವಳಿ ಉತ್ಸವ ನಡೆಸಲಾಗುತ್ತಿದೆ. ಡಿ.22 ರಿಂದ ಏಳು ದಿನಗಳ ಕಾಲ ನಡೆಯುವ ಈ ಸಪ್ತಾಹ ಕಾರ್ಯಕ್ರಮಕ್ಕೆ ಸಾಕಷ್ಟು ಕಲಾವಿದರು ಬರಲಿದ್ದಾರೆ. ತಾವು ಆಗಮಿಸಿ ತಮ್ಮ ಕುಟುಂಬವನ್ನು ಕೂಡ ಕರೆತಂದು ಮನರಂಜನೆ ಪಡೆಯಿರಿ ಎಂದು ಆಹ್ವಾನಿಸಿದ್ದಾರೆ.
