ದಾಂಡೇಲಿ :
ದಾಂಡೇಲಿ ನಾಡವರ ಸಮಾಜದ ಆಶ್ರಯದಲ್ಲಿ ಇಂದು ಸಂಜೆ 5:30 ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರ ಅಭಿನಂದನಾ ಕಾರ್ಯಕ್ರಮ ನಾಡವರ ಸಮಾಜದ ಸಭಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಕಾರವಾರದ ಲೋಕಾಯುಕ್ತ ಡಿವೈಎಸಪಿ ಧನ್ಯಾ ಎನ್ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರವಾರದ ದಂತ ವೈದ್ಯರಾದ ಸಮೀರಕುಮಾರ ಟಿ ನಾಯಕ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಸಮಾಜದ ಹಿರಿಯರಾದ ಪ್ರಕಾಶ ಬಿ.ನಾಯಕ ಕಣಗಿಲ್ ಗೌರವ ಉಪಸ್ಥಿತಿ ಇರಲಿದ್ದಾರೆ. ನಾಡವರ ಸಂಘದ ಅಧ್ಯಕ್ಷ ಸುಭಾಶ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಸಮಾಜ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಉಪಾಧ್ಯಕ್ಷೆ ಜೀವನಾ ನಾಯಕ , ಕಾರ್ಯದರ್ಶಿ ಮಿಥುನ ನಾಯಕ, ಖಜಾಂಚಿ ರವಿ ಗಾಂವಕರ ಮನವಿ ಮಾಡಿದ್ದಾರೆ.
