ಕಾರವಾರ:
ನಗರದ ಟ್ಯಾಗೋರ್ ಕಡಲ ತೀರದಲ್ಲಿ ಡಿ.22 ರಿಂದ ನಡೆಯುತ್ತಿರುವ ಕರಾವಳಿ ಉತ್ಸವದಲ್ಲಿ ಇದೀಗ ಹೆಲಿಕಾಪ್ಟರ್ ಪ್ರವಾಸ ಕೂಡ ಆರಂಭವಾಗಿದ್ದು ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರಮುಖ ಆಕರ್ಷಣೆಯಾಗಿದೆ.
ಸಮುದ್ರದ ಮೇಲಿಂದಲೇ ಕರಾವಳಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಈ ಹೆಲಿಕಾಪ್ಟರ್ ಪ್ರವಾಸವು ಡಿ.24 ರಿಂದ ಆರಂಭಗೊಳ್ಳಿದೆ. ಇಲ್ಲಿನ ಮೀನು ಮಾರುಕಟ್ಟೆಯ ಹಳೆಯ ಕಟ್ಟಡದ ಬಳಿಯ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ತಾಂತ್ರಿಕ ಸಿದ್ಧತೆಗಳು ಕೂಡ ಅಂತಿಮ ಹಂತ ತಲುಪಿವೆ. ಖಾಸಗಿ ಕಂಪನಿಯೊಂದರಿಂದ ಜಿಲ್ಲಾಡಳಿತಕ್ಕೆ ಹೆಲಿ ಟೂರಿಸಂ ಸೇವೆ ಕುರಿತಂತೆ ಅಧಿಕೃತ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದೀಗ ಜಿಲ್ಲಾಡಳಿತದಿಂದ ಅನುಮತಿ ಸಿಕ್ಕಿದೆ. ಸಾರ್ವಜನಿಕರಿಗೆ 8 ನಿಮಿಷಗಳವರೆಗೆ ಹೆಲಿಕಾಪ್ಟರ್ ವಿಹಾರ ಲಭ್ಯವಾಗಲಿದೆ. ನಾಲ್ಕು ಜನರು ಒಮ್ಮೆ ಹಾರಾಟ ನಡೆಸಬಹುದಾದ ಈ ಹೆಲೆಕಾಪ್ಟರ್ನಲ್ಲಿ ಓರ್ವರಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಶುಲ್ಕವನ್ನು ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಹೆಲಿಪ್ಯಾಡ್ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಕಾರ್ಯ ಆರಮಭವಾಗಿದ್ದು ಮಂಗಳವಾರ ಸಂಜೆ ಬಂದ ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಸುರಕ್ಷತೆಯ ಬಗ್ಗೆ ಡಿವೈಎಸ್ಪಿ ಗಿರೀಶ ಅವರು ಸ್ಥಳ ಪರಿಶೀಲಕನೆ ನಡೆಸಿದ್ದಾರೆ. ಈ ಹೆಲಿಕಾಪ್ಟರ್ ಪ್ರವಾಸದ ಮೂಲಕ ಕರಾವಳಿ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
