ವಿರಾಟ್ ಹಿಂದೂ ಸಮಾವೇಶ
ಹೊಳಪಿನ ಜೀವನಶೈಲಿಯಲ್ಲಿ ಯುವ ಜನತೆ ಸಂಸ್ಕೃತಿಯನ್ನು ಮರೆಯಬಾರದು
ಹಳಿಯಾಳ:
ವಿರಾಟ್ ಹಿಂದೂ ಸಮಾವೇಶ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 25ರಂದು ಜರುಗಲಿದ್ದು, ಸಮಸ್ತ ಹಿಂದೂ ಬಾಂಧವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಹಿಂದೂ ಪರಂಪರೆ ಸಂಸ್ಕೃತಿ ನಾಡು-ನುಡಿಯ ಕುರಿತು ಇಂದಿನ ಯುವ ಪೀಳಿಗೆಗೆ ಕುಟುಂಬ ವೃದ್ಧಿ ಆಚರಣೆ ವಿಚಾರಣೆ ಸಂಪ್ರದಾಯ ಕುರಿತು ಯುವ ಪೀಳಿಗೆಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಸಮಸ್ತ ಹಿಂದೂ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ.
ಹಿಂದೂ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ಆಚಾರ ವಿಚಾರ ಸಂಪ್ರದಾಯ ಇವೆಲ್ಲ ಅಮೂಲ್ಯವಾದದು ಜೀವನ ಶೈಲಿ ಬದಲಾದ ಹಾಗೆ ಇವೆಲ್ಲವೂ ಬದಲಾಗುತ್ತಿವೆ ಆದ್ದರಿಂದ ಇವೆಲ್ಲದರ ಅರಿವು ಜ್ಞಾನ ತಿಳುವಳಿಕೆ ತಿಳಿಸುವ ನಿಟ್ಟಿನಲ್ಲಿ ಸಮಾವೇಶ ಏರ್ಪಡಿಸಲಾಗಿದ್ದು ಕಾರ್ಯಕ್ರಮದಲ್ಲಿ ತಮ್ಮ ತಂದೆ ತಾಯಿಯರ ಪಾದಪೂಜೆ, ಕುಟುಂಬದವರೊಂದಿಗೆ ಸಾಮೂಹಿಕ ಭೋಜನವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ಶ್ರೀ ಗ್ರಾಮದೇವಿ ಮೈದಾನದಲ್ಲಿ ಜರುಗಲಿದ್ದು ಸಂಜೆ 3:30ಕ್ಕೆ ಶೋಭಾ ಯಾತ್ರೆ ಕುಂಭ ಮತ್ತು ಭಜನೆ ಭಾರತ್ ಮಾತಾ ಭಾವಚಿತ್ರದೊಂದಿಗೆ ಶ್ರೀ ಗಣಪತಿ ದೇವಸ್ಥಾನ ಮೂಲಕ ಪ್ರಾರಂಭಗೊಳ್ಳುವುದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಸದ್ಗುರು ಸುಬ್ರಹ್ಮಣ್ಯ ಮಹಾ ಸ್ವಾಮೀಜಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಕೆಕೆ ಹಳ್ಳಿ ಇವರು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಹಿಂದೂ ಪರ ಸಂಘಟನೆಗಳು ಮತ್ತು ಸಮಸ್ತ ಹಿಂದೂ ಬಾಂಧವರ ವತಿಯಿಂದ ವಿರಾಟ್ ಹಿಂದೂ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಲಾಗಿದೆ.
