ದಾಂಡೇಲಿ :
ಮೇಯಲೆಂದು ಮನೆ ಸಮೀಪದ ಕಾಡಿನೊಳಗೆ ಬಿಟ್ಟಿದ್ದ ಎಮ್ಮೆಗಳ ಮೇಲೆ ಹುಲಿಗಳು ದಾಳಿ ನಡೆಸಿ, ಎರಡು ಎಮ್ಮೆಗಳನ್ನು ಸಾಯಿಸಿ, ಇನ್ನೆರಡು ಎಮ್ಮೆಗಳಿಗೆ ಗಂಭೀರ ಗಾಯಗೊಳಿಸಿದ ಘಟನೆ ತಾಲೂಕಿನ ಹರೇಗಾಳಿಯಲ್ಲಿ ನಡೆದಿದೆ.
ಅಂಬೇವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹರೇಗಾಳಿ ನಿವಾಸಿ ಸಕ್ಕುಬಾಯಿ ಸಗ್ಗು ಬೋಡಕೆಯವರಿಗೆ ಸೇರಿದ ಎಮ್ಮೆಗಳಾಗಿದ್ದು, ಹುಲಿಗಳ ದಾಳಿಯಿಂದಾಗಿ ಎರಡು ಎಮ್ಮೆಗಳು ಮೃತಪಟ್ಟು, ಇನ್ನೆರಡು ಎಮ್ಮೆಗಳು ಗಂಭೀರ ಗಾಯಗೊಂಡಿದೆ. ಹೈನುಗಾರಿಕೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಬದುಕು ನಡೆಸುತ್ತಿದ್ದ ಸಕ್ಕುಬಾಯಿ ಸಗ್ಗು ಬೋಡಕೆಯವರು ಇದೀಗ ತೀವ್ರ ಕಂಗಲಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರವನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.
