ಹೊನ್ನಾವರ:
ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ಮಂಕಿ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ. ಒಟ್ಟು 20 ವಾರ್ಡ್ಗಳ ಪೈಕಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮಂಕಿಯಲ್ಲಿ ಕಮಲ ಅರಳಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ 08 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಮಂಕಿ ಪಂಚಾಯತ್ನ್ನು ಪಟ್ಟಣ ಪಂಚಾಯತ್ ಎಂದು ಘೋಷಣೆ ಮಾಡಿದ ಬರೋಬ್ಬರಿ 4 ವರ್ಷಗಳ ನಂತರ ಈ ಚುನಾವಣೆ ನಡೆದಿದ್ದು, ಮೊದಲ ಅವಧಿಯ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಈ ಫಲಿತಾಂಶವು ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ತೀವ್ರ ಮುಖಭಂಗವುಂಟುಮಾಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ, ಮಾಜಿ ಸಚಿವ ಶಿವಾನಂದ ನಾಯ್ಕ ಅವರ ತಂತ್ರಗಾರಿಕೆ ಮೇಲುಗೈ ಸಾಧಿಸಿದ್ದು, ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಪಾಳೆಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಹೊನ್ನಾವರದ ಶರಾವತಿ ವೃತ್ತದಲ್ಲಿ ಜಮಾಯಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಸಡಗರದಿಂದ ಆಚರಿಸಿದರು.
ವಾರ್ಡ್ವಾರು ವಿಜೇತ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ:
ವಾರ್ಡ್ 1 (ಮಡಿ): ಜ್ಯೋತಿ ಸತೀಶ ಖಾರ್ವಿ (ಬಿಜೆಪಿ) – 407 ಮತಗಳು
ವಾರ್ಡ್ 2 (ದೇವರಗದ್ದೆ): ಮೀನಾಕ್ಷಿ ಕೃಷ್ಣ ಹಸ್ಲರ (ಬಿಜೆಪಿ) – 297 ಮತಗಳು
ವಾರ್ಡ್ 3 (ಹಳೇಮಠ): ಆನಂದ ಗಣಪತಿ ನಾಯ್ಕ (ಬಿಜೆಪಿ) – 276 ಮತಗಳು
ವಾರ್ಡ್ 4 (ನವಾಯತಕೇರಿ): ರೇಷ್ಮಾ ಫರ್ನಾಂಡೀಸ್ (ಕಾಂಗ್ರೆಸ್)
ವಾರ್ಡ್ 5 (ಕಟ್ಟೆಅಂಗಡಿ): ಮಹಮ್ಮದ್ ಸಿದ್ದಿಕ್ ಹಸನ್ ಬಾಪು (ಕಾಂಗ್ರೆಸ್)
ವಾರ್ಡ್ 6 (ನಾಖುದಾಮೊಹಲ್ಲಾ): ರಹಮತುಲ್ಲಾ ಬೊಟ್ಲೇರ (ಕಾಂಗ್ರೆಸ್) – 435 ಮತಗಳು
ವಾರ್ಡ್ 7 (ಬಣಸಾಲೆ): ಸವಿತಾ ಮಲ್ಲಯ್ಯ ನಾಯ್ಕ (ಬಿಜೆಪಿ) – 220 ಮತಗಳು
ವಾರ್ಡ್ 8 (ದಾಸನಮಕ್ಕಿ): ಪೀಟರ ಎಸ್. ರೊಡ್ರಗೀಸ್ (ಬಿಜೆಪಿ) – 287 ಮತಗಳು
ವಾರ್ಡ್ 9 (ಹೊಸಹಿತ್ಲ): ಗೀತಾ ರಮಾಕಾಂತ ಹರಿಕಂತ್ರ (ಬಿಜೆಪಿ) – 472 ಮತಗಳು
ವಾರ್ಡ್ 10 (ದೊಡ್ಡಗುಂದ): ಗಜಾನನ ಬಾಲಯ್ಯ ನಾಯ್ಕ (ಕಾಂಗ್ರೆಸ್) – 376 ಮತಗಳು
ವಾರ್ಡ್ 11 (ಗುಳದಕೇರಿ-1): ಸತೀಶ ದೇವಪ್ಪ ನಾಯ್ಕ (ಬಿಜೆಪಿ) – 282 ಮತಗಳು
ವಾರ್ಡ್ 12 (ಗುಳದಕೇರಿ-2): ಸಂಜೀವ ಗಂಗಾಧರ ನಾಯ್ಕ (ಕಾಂಗ್ರೆಸ್) – 272 ಮತಗಳು
ವಾರ್ಡ್ 13 (ಚಿತ್ತಾರ): ರೇಖಾ ಗಿರೀಶ ನಾಯ್ಕ (ಬಿಜೆಪಿ) – 548 ಮತಗಳು
ವಾರ್ಡ್ 14 (ಗಂಜಿಗೇರಿ): ನೇತ್ರಾವತಿ ಈಶ್ವರ ಗೌಡ (ಬಿಜೆಪಿ) – 223 ಮತಗಳು
ವಾರ್ಡ್ 15 (ಸಾರಸ್ವತಕೇರಿ): ರವಿ ಉಮೇಶ ನಾಯ್ಕ (ಬಿಜೆಪಿ) – 592 ಮತಗಳು
ವಾರ್ಡ್ 16: ಉಲ್ಲಾಸ ಅಂಗದ ನಾಯ್ಕ (ಕಾಂಗ್ರೆಸ್) – 155 ಮತಗಳು
ವಾರ್ಡ್ 17 (ತಾಳಮಕ್ಕಿ): ಉಷಾ ಕೃಷ್ಣ ನಾಯ್ಕ (ಕಾಂಗ್ರೆಸ್) – 397 ಮತಗಳು
ವಾರ್ಡ್ 18 (ಕೊಪ್ಪದಮಕ್ಕಿ): ವಿಜಯಾ ಮೋಹನ ನಾಯ್ಕ (ಬಿಜೆಪಿ) – 388 ಮತಗಳು
ವಾರ್ಡ್ 19: ವಿನಾಯಕ ಮೊಗೇರ (ಕಾಂಗ್ರೆಸ್) – 299 ಮತಗಳು
ವಾರ್ಡ್ 20: ಸವಿತಾ ಹನುಮಂತ ನಾಯ್ಕ (ಬಿಜೆಪಿ) – 344 ಮತಗಳು
