ಭಟ್ಕಳ:
ಭಟ್ಕಳದ ಮುರಡೇಶ್ವರ ಕಡಲ ತೀರದಲ್ಲಿ ಶುಕ್ರವಾರ ಮುಳುಗುತ್ತಿದ್ದ ಪ್ರವಾಸಿಗನನ್ನು ಜಲ ಸಾಹಸ ಕ್ರಿಡೆಯ ಸಿಬ್ಬಂದಿಯು ರಕ್ಷಿಸಿದ್ದಾರೆ.
ಬೆಳಗಾವಿ ಮೂಲದ ಪ್ರವಾಸಿಗ ಪ್ರಸಾದ ರಕ್ಷಣೆಯಾದ ವ್ಯಕ್ತಿ. ಇವರು ಕಡಲ ತೀರದಲ್ಲಿ ಆಡುವಾಗ ಅಲೆಗಳ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಓಸಿಯನ್ ಅಡ್ವೆಂಚರ್ ಜಲ ಸಾಹಸ ಕ್ರಿಡೆಯ ಸಿಬ್ಬದಿಯಾದ ವೀಘನೇಶ್ವರ ಹರಿಕಾಂತ ಹಾಗೂ ಜೀವ ರಕ್ಷಕ ಸಿಬ್ಬಂದಿ ರಾಜೇಶ ಅವರು ಜಟ್ ಸ್ಕೀ ಸ್ಪೀಡ್ ಬೋಟ್ ಮೂಲಕ ತೆರಳಿ ಪ್ರವಾಸಿಗನನ್ನು ರಕ್ಷಣೆ ಮಾಡಿದ್ದಾರೆ. ಟೆಂಡರ್ ಮುಗಿದ ಕಾರಣ ಮುರಡೇಶ್ವರದ ಜಲ ಸಾಹಸ ಕ್ರಿಡೆಗಳನ್ನು ಬಂದ ಮಾಡಲು ಜಿಲ್ಲಾಡಳಿತ ನಿರ್ಧರಿಸಿತ್ತು. ಇದೀಗ ಕಾಲಾವಕಾಶ ಮುಂದೂಡಿದ್ದು ಜಲ ಸಾಹಸ ಕ್ರಿಡೆಯ ಬೋಟ್ನಿಂದಲೇ ಓರ್ವ ಪ್ರವಾಸಿಗನ ಜೀವ ಉಳಿದಿದೆ.
