ದಾಂಡೇಲಿ : ನಗರದ ಅಂಬೇವಾಡಿಯ ಶ್ರೀ ನಾಗದೇವತಾ ಮಂದಿರದಲ್ಲಿ ಶ್ರೀ ನಾಗದೇವತಾ ಸಮಿತಿಯ ಆಶ್ರಯದಲ್ಲಿ 28ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮವು ಶುಕ್ರವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.
ಮೂಲ್ಕಿ ಕಾರ್ನಾಡಿನ ನಾಗಪಾತ್ರಿ ಹಯಗ್ರೀವ ಪಡ್ಡಿಲ್ಲಾಯರ ಪ್ರಧಾನ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ಬೆಳಗಿನಿಂದಲೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿತು. 108 ಬ್ರಹ್ಮಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ಉದ್ಯಾಪನ ಹೋಮ, ತುಲಾಭಾರ ಸೇವೆ ಜರುಗಿತು.
ಮಧ್ಯಾಹ್ನ ಮಹಾಪೂಜೆ ನಡೆದು ತದನಂತರ ನಾಗದರ್ಶನ ಜರುಗಿತು. ಆನಂತರ ಮಧ್ಯಾಹ್ನ ಸಾರ್ವಜನಿಕ ಅನ್ನಸಂಪರ್ಪಣೆ ನಡೆಯಿತು.
ವಾರ್ಷಿಕ ವರ್ಧಂತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶ್ರೀ ನಾಗದೇವತಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಶ್ರಮಿಸಿದ್ದರು.
