ದಾಂಡೇಲಿ:
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಸಮಿತಿಯು
ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕು ವ್ಯಾಪ್ತಿಯನ್ನು ಹೊಂದಿರುವ ಹಿರಿಯ ಉಪ ನೊಂದಣಿ ಕಚೇರಿ ಹಳಿಯಾಳದಲ್ಲಿ ಜನವರಿ 22.ರಂದು ಉಪನೊಂದಣಿ ಅಧಿಕಾರಿ ಮತ್ತು ಮಹಿಳಾ ಅಧಿಕಾರಿಗಳಿಬ್ಬರ ನಡುವೆ ಜಗಳದ ಕಾರಣಕ್ಕೆ ನೊಂದಣಿ ಕಾರ್ಯ ಸ್ಥಗಿತಗೊಂಡಿರುತ್ತದೆ. ಈ ಜಗಳಕ್ಕೆ ಮೂಲ ಕಾರಣ ಈ ಪ್ರದೇಶದ ವ್ಯಾಪ್ತಿಗೆ ಬರದ ಹಾಗೂ ದಾಖಲೆಗಳು ಸರಿ ಇರಲಾರದ ಮದುವೆ ನೋಂದಣಿಗೆ ಪೇಮೇಂಟ್ ಅಪ್ರೂವಲ್ ಅನ್ನು ಹಿರಿಯ ಉಪನೋಂದಣಾಧಿಕಾರಿಯೇ ಮಾಡಿ, ನೋಂದಣಿಯನ್ನು ಮಾತ್ರ ಮಹಿಳಾ ಅಧಿಕಾರಿ ಮಾಡುವಂತೆ ಅವರ ಮೇಲೆ ಒತ್ತಡ ಹೇರಿ, ಮಾನಸಿಕ ಹಿಂಸೆ ನೀಡಿರುವುದೇ ಮೂಲ ಕಾರಣವಾಗಿದೆ. ಈ ಮದುವೆ ನೋಂದಣಿ ಪ್ರಕ್ರಿಯೆಯನ್ನು ಕೂಡ ಮೇಲಾಧಿಕಾರಿಗಳು ತನಿಖೆಗೊಳಪಡಸಬೇಕು ಎಂದು ಆಗ್ರಹಿಸುತ್ತೇವೆ.
ಇವರ ಈ ದುರ್ವರ್ತನೆಯಿಂದಾಗಿ ಬಂದಂತ ಜನರು ಸಾಕಷ್ಟು ಸಮಸ್ಯೆಯನ್ನು ಅನುಭವಿಸಿದ್ದಾರೆ. ಮತ್ತು ಆನ್ಲೈನ್ ನಿಗದಿ ಮಾಡಿಕೊಂಡಿರುವ ಕಾಗದಪತ್ರಗಳ ನೋಂದಣಿ ಕಾರ್ಯವು ಕೂಡ ನಡೆಯುತ್ತಿಲ್ಲವಾದ್ದರಿಂದ ನೊಂದಣಿ ನಿಗದಿ ಮಾಡಕೊಂಡಿದ್ದ ಜನರು ಅಂದು ತೊಂದರೆಯನ್ನು ಅನುಭವಿಸುವಂತಾಯ್ತು. ಅನ್ಯಾಯವಾಗಿ ಜನ ಸಾಮಾನ್ಯರ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದು ಅಲ್ಲದೇ, ಇಲಾಖೆಯ ಘನತೆಗೆ ಕುಂದುಂಟು ಮಾಡುವ ದುರ್ವರ್ತನೆ ತೋರಿರುವ ಉಪ ಹಿರಿಯ ಉಪನೋಂದಣಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಜಿಲ್ಲಾ ಸಮಿತಿಯು ಆಗ್ರಹಿದೆ.
ಹಿರಿಯ ಉಪನೋಂದಣಾಧಿಕಾರಿಯಾದ ದೇವೆಂದ್ರಪ್ಪ ಅವರು ತಮ್ಮ ಅಕ್ಕನ ಮಗಳಾದ ಅನ್ನಪೂರ್ಣ ಅಸುಂಡಿ ಇವರನ್ನು ತಮ್ಮ ಕಛೇರಿಯಲ್ಲಿಯೇ ಹೊರಗುತ್ತಿಗೆಯಡಿ ಕೆಲಸಕ್ಕೆ ನಿಯೋಜನೆಗೊಳಿಸಿಕೊಂಡಿದ್ದಾರೆ ಇದು ನಿಯಮ ಉಲ್ಲಂಘನೆ. ಅಲ್ಲದೇ ದಾಖಲೆಗಳು ಸರಿಯಿದ್ದು ಸರಳವಾಗಿ ನೋಂದಣಿಯಾಗುವ ಕೆಲಸವನ್ನು ತಮ್ಮ ಸಂಬಂಧಿ ಮಹಿಳೆಗೆ ವಹಿಸುತ್ತಾರೆ. ದಾಖಲೆಗಳು ಸರಿಯಿರಲಾರದ ಹಾಗೂ ವಿವಾಹ ನೋಂದಣಿಯಾಗಲು ವಿವಾದಗಳಿರುವುಗಳನ್ನು ಕಿರಿಯ ಮಹಿಳಾ ಅಧಿಕಾರಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಲಾಖೆಯ ಘನತೆಯನ್ನು ಹಾಳು ಮಾಡುತ್ತಿರುವ ಹಾಗೂ ಮಹಿಳಾ ಅಧಿಕಾರಿಗಳಿಗೆ ಮಾನಸಿಕ ಹಿಂಸೆ, ಒತ್ತಡ ನಿರ್ಮಿಸುತ್ತಿರುವ ದೇವೆಂದ್ರಪ್ಪ . ಕೆ.ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಇವರ ಮೇಲೆ ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ಸೇರಿದಂತೆ ಮೂರು ತಾಲೂಕಿಗೆ ಒಬ್ಬರೇ ಸಬ್ ರಜಿಸ್ಟ್ರಾರ್ ಕಛೇರಿಯಿದ್ದು, ಇದರಿಂದಾಗಿ ದಾಂಡೇಲಿ ತಾಲೂಕಿನ ಜನತೆಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಉಪನೋಂದಣಾಧಿಕಾರಿಯನ್ನು ನೇಮಿಸಿಕೊಂಡು ದಾಂಡೇಲಿಯಲ್ಲಿ ಉಪ ನೋಂದಣಿ ಕಛೇರಿಯನ್ನು ಆರಂಭಿಸಬೇಕು. ಒಂದು ವೇಳೆ ಸದರಿ ಕಛೇರಿ ಆರಂಭಿಸುವುದು ತಡವಾಗುತ್ತೆ ಅಂತಾದರೆ ಕಛೇರಿ ಆರಂಭವಾಗುವವರೆಗೆ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ತಾಲ್ಲೂಕಿನ ಜನತೆ ಪ್ರತಿಭಟನೆ ನಡೆಸಲಾಗುವುದು ಎಂದು ಡಿವೈಎಫ್ಐ ಆಗ್ರಹಿಸುತ್ತದೆ.
ಶಾಸಕ ಆರ್. ವಿ ದೇಶಪಾಂಡೆ
ಹಾಗೂ ಮೌನಿಶ್ ಮುದ್ಗಿಲ್ ಮುಖ್ಯ ಕಾರ್ಯದರ್ಶಿ, ಮುಲ್ಲಾ ಮುಹಿಲಾನ್ ಎಂ.ಪಿ
ಮಾನ್ಯ ಇನ್ಸಪೆಕ್ಟರ್ ಆಪ್ ಜನರಲ್
ರೆಜಿಸ್ಟ್ರೇಶನ್ & ಕಮಿಷನರ್ ಆಪ್ ಸ್ಟ್ಯಾಂಪ್ಸ್ ಕಂದಾಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಇವರುಗಳಿಗೆ ಗೌರವ ಪ್ರತಿಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
