ಕಾರವಾರ:
ಕದ್ರಾದ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಚಿರಾಗ್ ನನ್ನು ಚೆನೈನಲ್ಲಿ ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ದೀಪನ್ ಎಂಎನ್ ಹೇಳಿದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಪತ್ತೆಗಾಗಿ ಮೂರು ಇನ್ಸ್ಪೆಕ್ಟರ್ ಹಾಗೂ ಆರು ಪಿಎಸ್ಸೈಗಳು ಕರ್ತವ್ಯ ನಿರ್ವಹಿಸಿದ್ದರು.
ಚಿರಾಗ್ ತಪ್ಪಿಸಿಕೊಳ್ಳಲು ಸಹಾಯ ನಾಡಿದ ಆತನ ಸಂಬಂಧಿ ಸುವರ್ಣ ಹಾಗೂ ನಿತಿನ್ ಗಾವ್ಕರ ಅವರ ಮೇಲೆಯೂ ಪ್ರಕರಣ ದಾಖಲಿಸಿ ವಿಚಾರಣರ ಮಾಡುತ್ತೇವೆ. ಅಲ್ಲದೇ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದವರ ಮೇಲೆ ಪ್ರಕರಣ ದಾಖಲಿ ಮಾಡಲಾಗಿದೆ.
ಆರೋಪಿಯು ತಪ್ಪಿಸಿಕೊಳ್ಳಲು ಬೆಂಗಳೂರು, ಪುಣೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್ ಗೆ ಓಡಾಡಿದ್ದು ಕಂಡು ಬಂದಿದೆ. ಮರು ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಇಬ್ಬರ ಮೊಬೈಲ್ ತನಿಖೆ ಮುಗಿದ ಬಳಿಕ ಅಂತಿಮ ವರದಿಯನ್ನು ಸಲ್ಲಿಸುತ್ತೇವೆ ಎಂದರು.
ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಲೋಪ ಕಂಡು ಬಂದಿತ್ತು. ಹೀಗಾಗಿಯೇ ಪಿಎಸ್ಸೈ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆಯೂ ಸಂಪೂರ್ಣ ತನಿಖೆ ನಡೆಯುತ್ತದೆ ಎಂದರು.
