ಸಿದ್ದಾಪುರ :
ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಬಿಗಿಲೆದ್ದ ಅಘನಾಶಿನಿ ನದಿ ತಿರುವು ಯೋಜನೆಯ ಹೊಗೆಯಾಡುತ್ತಿರುವಾಗಲೇ ಶಾಕಿಂಗ್ ಸಂಗತಿಯೊಂದು ಹೊರ ಬಂದಿದೆ. ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಸದ್ದೇ ಇಲ್ಲದೆ ಮರಗಳು ಹಾಗೂ ವಿದ್ಯುತ್್ ಕಂಬಗಳಲ್ಲಿ ಮಾರ್ಕಿಂಗ್ ಮಾಡಲಾಗಿದೆ.
ಸ್ಥಳೀಯರಿಗೆ ತಿಳಿಯದಂತೆ ಅರಣ್ಯದಲ್ಲಿ ಮರಗಳಿಗೆ ಹಾಗೂ ರಸ್ತೆಯಲ್ಲಿನ ವಿದ್ಯುತ್ ಕಂಬಗಳಿಗೆ ಮಾರ್ಕ್ ಮಾಡಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ಸದಾ ಜನರು ತಿರುಗಾಡುವ ಪ್ರದೇಶವಾದರೂ ಯಾವ ಸಮಯದಲ್ಲಿ ಬಂದು ಮಾರ್ಕಿಂಗ್ ಮಾಡಿದ್ದಾರೆ ಎನ್ನುವೇ ಗ್ರಾಮಸ್ಥರಿಗೆ ಯೋಚನೆಯಾಗಿದೆ. ಸದ್ಯ ಹೋರಾಟ ನಡೆಯುತ್ತಿರುವಾಗಲೇ ಈ ರೀತಿಯ ಘಟನೆಗಳು ಇನ್ನಷ್ಟು ಸಂಘರ್ಷಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನುವ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿದೆ.
