ಕಾರವಾರ:
ಸರಕಾರದ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆಯಂತೆ ಸರಕಾರಿ ಕಚೇರಿಗಳಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವ ಕುರಿತಂತೆ ಹುಬ್ಬಳ್ಳಿಯ ಖಾದಿ ಹುಟ್ಟುವಳಿ ಕೇಂದ್ರದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ತಾತ್ಕಾಲಿಕ ಮಳಿಗೆಯನ್ನು ತೆರೆಯಲಾಯಿತು.
ಮಳಿಗೆಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಮಳಿಗೆಗೆ ಭೇಟಿ ನೀಡಿ ಸಾಂಕೇತಿಕವಾಗಿ ಸರಕಾರಿ ನೌಕರರಿಗೆ ಖಾದಿ ಉಡುಪನ್ನು ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಸರಕಾರಿ ನೌಕರರು ಖಾದಿ ಉಡುಪುಗಳನ್ನು ಖರೀದಿಸಿದರು. ಬಣ್ಣಬಣ್ಣದ ಖಾದಿ ಸೀರೆ, ಅಂಗಿಗಳ, ಕುರ್ತಾ ಹಾಗೂ ಇನ್ನಿತರ ಉಡುಪುಗಳು ಬಿಕರಿಯದವು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವ ನಾಯ್ಕ, ಉಪಾಧ್ಯಕ್ಷ ರಮೇಶ ನಾಯ್ಕ ಹಾಗೂ ಇತರರು ಇದ್ದರು.
