ದಾಂಡೇಲಿ:
ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ನಗರದ ಡಿಎಸ್ಎಫ್ಎ ಮೈದಾನದಲ್ಲಿ ಫೆ.೧೩,೧೪,೧೫ ಮೂರು ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಳಿಗೆ ಇಂದು ಫೆ.೧೨ರ ಸಂಜೆ ೫ ಗಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ಪ್ರೇಸ್ ಮತ್ತು ಪೊಲೀಸ ತಂಡಗಳಿಂದ ಉದ್ಘಾಟನಾ ಪ್ರದರ್ಶನ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ಡಿಪಿಎಲ್ ಉಪಾಧ್ಯಕ್ಷ ಇಮಾಮ್ ಸರ್ವರ ಹೆಳಿದರು.
ಅವರು ಮೂರು ದಿನಗಳ ಕಾಲ ನಡೆಯುವ ಕ್ರಿಕೆಟ್ ಪಂದ್ಯವಳಿಗೆ ತಯಾರಿಯನ್ನು ಮಾಡುತ್ತ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಪಂದ್ಯಾವಳಿಯಲ್ಲಿ ಒಟ್ಟು ೮ ಭಗವಹಿಸಲಿದ್ದು, ಪ್ರತಿ ದಿನ ೬ ಕ್ರಿಕೆಟ್ ಪಂದ್ಯಾಟಗಳು ನಡೆಯಲಿವೆ. ಕೊನೆ ದಿನ ವಿಜೆತರಿಗೆ ಮತ್ತು ಕ್ರಿಕೆಟ್ ಆಟದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನಗಳ ವಿತರಣೆ ನಡೆಲಿದೆ ಎಂದ ಅವರು ಪ್ರಥಮೆ ವಿಜೇತರಿಗೆ ರೂ.೨,೨೨,೨೨೨/- ದ್ವಿತೀಯ ವಿಜೇತರಿಗೆ ೧,೧೧,೧೧೧/- ಹಾಗೂ ಫಲಕ ನೀಡಲಾಗುವುದು. ಕ್ರಿಕೆಟ್ ಪಂದ್ಯಾಟದಲ್ಲಿ ವಿವಿದ ವಿಭಾಗಗಳಲ್ಲಿ ಸಾಧನೆ ಗೈದ ಕ್ರಿಕೆಟಿಗರಿಗೆ ಪ್ರಶಸ್ತಿ ಹಾಗೂ ಫಲಕ ನೀಡುತ್ತೇವೆ ಎಂದರು.
ಸಂಘಟಕಾರದ ಸಚಿನ ಕಾಮತ ಮಾತನಾಡಿ ಫೆ.೧೨ ರಂದು ಸಂಜೆ ೫ ಗಂಟೆಗ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾಂಡೇಲಿ ವೆಸ್ಟ ಕೋಸ್ಟ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ, ಮೆಗ್ನೇಟಾ ಐಕ್ರೀಮ್ ಕಂಪನಿ ಮಾಲಿಕರಾದ ದಿಗ್ವಿಜಯ ಸಿದ್ನಾಳ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ ಉಪಸ್ಥಿತರಿರುವರು ಎಂದರು.
ಡಿಪಿಎಲ್ ಕಾರ್ಯದರ್ಶಿ ಕುಲದೀಪ ರಜಪೂತ ಮಾತನಾಡಿ ಕಳೆದ ೫ ವರ್ಷಗಳಿಂದ ನಿರಂತರವಾಗಿ ಆಯೋಜಿಸಿಕೊಂಡು ಬಂದಿರುವ ನಮ್ಮ ಡಿಪಿಎಲ್ ಪಂದ್ಯಾವಳಿಯ ಯಶಸ್ಸಿಗೆ ಕ್ರಿಕೆಟ್ ಪ್ರೇಮಿಗಳೆ ಕಾರಣ, ಕಳೆ ಮೂರು ವರ್ಷಗಳಿಂದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತ ದಾಂಡೇಲಿ ತಾಲೂಕು, ಉತ್ತರ ಕನ್ನಡ ಜಿಲ್ಲೆಯ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡುವ ಕೆಲಸ ನಮ್ಮ ದಾಂಡೇಲಿ ಪ್ರೀಮಿಯರ್ ಲೀಗ ಸಂಘಟನೆ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶಾಮಲ್, ಸಂದೀಪ ರಜಪೂತ, ಕರೀಮ ಖತಿಬ, ಅತುಲ ಮಾಡದೊಳ್ಕರ ಮುಂತಾದವರಿದ್ದರು.
ಎಚ್೧೧.೦೨-ಡಿಎನ್ಡಿ೨: ಇಂದಿನಿAದ ಹೊನಲು ಬೆಳಕಿನ ಡಿಪಿಎಲ್ ಕ್ರಿಕೆಟ್ ಪಂದ್ಯಾವಳಿ ಸುದ್ದಿಗೋಷ್ಠಿ.
