ಗೋಕರ್ಣ:
ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರನ ಕ್ಷೇತ್ರದಲ್ಲಿ ಶಿವರಾತ್ರಿ ದಿನವೇ ಭಕ್ತರೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ
ಗೋವಾ ರಾಜ್ಯದ ನಿವಾಸಿ ರತ್ನಾಕರ (76) ಸಾವಿಗೀಡಾದ ವ್ಯಕ್ತಿ. ಶಿವರಾತ್ರಿಯ ಹಿನ್ನೆಲೆ ಮಹಾಬಲೇಶ್ವರನ ದರ್ಶನ ಪಡೆಯಲೆಂದು ರತ್ನಾಕರ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ದೇವರ ಆತ್ಮಲಿಂಗದ ದರ್ಶನ ಪಡೆದು ಕ್ಷೇತ್ರದಿಂದ ಹೊರಕ್ಕೆ ತೆರಳಿದ ಬಳಿಕ ಅವರಿಗೆ ಹೃದಯಾಘಾತವಾಗಿದೆ.
ಅವರಿಗೆ ಈ ಹಿಂದೆ ಎರಡು ಬಾರಿ ಬೈಪಾಸ್ ಸರ್ಜರಿಯಾಗಿತ್ತು. ಇಂದು ಕ್ಷೇತ್ರದಲ್ಲಿ ದೇವರ ದರ್ಶನದ ಬಳಿಕ ಹೃದಯಾಘಾತವಾದ ಕೂಡಲೇ ಸಿಪಿಐ ಅವರು ಪೊಲೀಸ್ ವಾಹನದಲ್ಲಿ ಮಲಗಿಸಿ ಗೋಕರ್ಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
Related Stories
February 13, 2026
