ದಾಂಡೇಲಿ : ನಗರದ ಗ್ರಾಮೀಣ ಪ್ರದೇಶದ ಅಂಬೇವಾಡಿಯಲ್ಲಿರುವ ವಿಮಲ್ ಹೋಂ ಸ್ಟೇಯಲ್ಲಿ ಕಾರ್ಮಿಕನೋರ್ವ ನೇಣಿಗೆ ಶರಣಾದ ಘಟನೆ ಮಂಗಳವಾರ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ನಿವಾಸಿಯಾಗಿರುವ ಅಂದಾಜು 35 ವರ್ಷ ವಯಸ್ಸಿನ ಈತ ಸೊಮನಾಥ ಮಹಾಲಿಂಗಪ್ಪ ಗೆದ್ದಪ್ಪನವರ ಎಂದು ತಿಳಿದು ಬಂದಿದೆ. ಈತ ವಿಮಲ್ ಹೋಂ ಸ್ಟೇಯಲ್ಲಿ ರೂಮ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ. ಈತ ವಿಮಲ್ ಹೋಂ ಸ್ಟೇಯ ಕೊಠಡಿಯ ಒಳಗಡೆ ನೇಣಿಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ತರಲಾಗಿದೆ. ಘಟನಾ ಸ್ಥಳಕ್ಕೆ ದಾಂಡೇಲಿಯ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Related Stories
February 16, 2026
