ದಾಂಡೇಲಿ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ದಾಂಡೇಲಿ ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿ ಇವರ ಸಹಯೋಗದಲ್ಲಿ 15 ದಿನಗಳ “ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್” ತರಬೇತಿ ಕಾರ್ಯಕ್ರಮನಡೆಯಿತು .
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಗರದ ವೆಸ್ಕೋ ಲೇಡೀಸ್ ಕ್ಲಬ್ ಅಧ್ಯಕ್ಷ್ಯೆ ಸೀಮಾ ಶರ್ಮಾ ದೀಪ ಹಚ್ಚುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ಮಹಿಳೆಯೂ ಸ್ವಉದ್ಯೋಗದ ಮೂಲಕ ಸ್ವಾವಲಂಬಿಯಾಗಿ, ತಮ್ಮ ಕುಟುಂಬ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.ಇಂದಿನ ಸಮಾಜದಲ್ಲಿ ಮಹಿಳೆಯರು ಸ್ವಉದ್ಯೋಗವನ್ನು ಹೊಂದುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ದಾಂಡೇಲಿ ಡಿಜಿಎಂ ಶ್ರೀ ರಾಘವೇಂದ್ರ ರಾವ್ ಅವರು ಮಾತನಾಡಿ, ಕಳೆದ ಮೂರು–ನಾಲ್ಕು ವರ್ಷಗಳಿಂದ ಸಂಸ್ಥೆಯ ಸಿಎಸ್ಆರ್ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳನ್ನು ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದ ನಿರ್ದೇಶಕರಾದ ಪ್ರಶಾಂತ್ ಬಡ್ಡಿಯವರು ತರಬೇತಿಯ ಮೂಲಕ ಕೌಶಲ್ಯ ಪಡೆದ ಪ್ರತಿಯೊಬ್ಬ ಮಹಿಳೆಯೂ ತನ್ನ ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬಲ್ಲಳು.ಸಂಸ್ಥೆಯ ವಿವಿಧ ತರಬೇತಿಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಕರೆ ನೀಡಿದರು.
ಇ ಸಂದರ್ಭದಲ್ಲಿ ವೆಸ್ಕೋ ಲೇಡೀಸ್ ಕ್ಲಬ್ ಕಾರ್ಯದರ್ಶಿ ಶ್ರೀಮತಿ ಜಿಗಲಿ ಮೈತ್ರಾ, ಭಾವನಾ ರಾಟಿ, ಆರಸೆಟಿ ಯೋಜನಾ ಸಂಯೋಜಕ ವಿನಾಯಕ ಚೌಹಾಣ್, ಸಂಜು ವರ್ಮಾ ಜೋಶಿ, ಪಿ.ಆರ.ಒ ವಿಭಾಗದ ಖಲಿಲ ಕುಲಕರ್ಣಿ, ಅಂದನಪ್ಪ ಅಂಗಡಿ, ನಾರಾಯಣ ವಾಡಕರ, ಮಹೇಶ್ ಹೊಸಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.
