ದಾಂಡೇಲಿ:
ದಾಂಡೇಲಿ ಪೊಲೀಸ್ ಉಪ ವಿಭಾಗದಲ್ಲಿ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ ಸ್ವತ್ತುಗಳನ್ನು ಸಂಬಂಧಿಸಿದ ದೂರುದಾರರು ಹಾಗೂ ವಾರಸುದಾರರಿಗೆ ಹತ್ತಾಂತರಿಸಲಾಯಿತು.
2023ರಲ್ಲಿ ದಾಂಡೇಲಿ ನಗರ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನವಾದ ದ್ವಿಚಕ್ರ ವಾಹನ ಮರಳಿ ಮಾಲೀಕರಿಗೆ ವಿತರಿಸಲಾಯಿತು. ಹಳಿಯಾಳ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹತ್ತಾಂತರಿಸಲಾಯಿತು. ಜೊಯಿಡಾ ತಾಲೂಕಿನ ರಾಮನಗರ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ನೀಡಲಾಯಿತು. ಅಂದಾಜು 20 ಲಕ್ಷ ರೂ. ಅಧಿಕ ಮೌಲ್ಯದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಹಸ್ತಾಂತರಿಸಲಾಯಿತು. ಮೊಬೈಲ್ ಕಳವು ಹಾಗೂ ನಾಪತ್ತೆ – ಪ್ರಕರಣಕ್ಕೆ ಸಂಬಂಧಪಟ್ಟಂತೆ 19 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಶಿವಾನಂದ ಅಂಬಿಗೇರ, ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ, ದಾಂಡೇಲಿ ನಗರ ಠಾಣೆಯ ಪಿಎಸಐ ಅಮೀನ್ ಅತ್ತಾರ್, ಗ್ರಾಮೀಣ ಠಾಣೆಯ ಪಿಎಸ್ಐ ಶಿವಾನಂದ ನಾವದಗಿ ಮತ್ತು ಜಗದೀಶ ನಾಯ್ಕ, ಹಳಿಯಾಳ ಪಿಎಸ್ಐ ಕೃಷ್ಣಗೌಡ ಅರಕೇರಿ,ಪಿಎಸ ಐ ಕೀರಣ ಪಾಟಿಲ , ರಾಮನಗರ ಪಿಎಸಐ ಹನುಮಂತ ಕುಡಿಗುಂಡಿ,ಹಾಗೂ ಸಿಬ್ಬಂದಿ ಇದ್ದರು
