ದಾಂಡೇಲಿ:
ನಗರದಲ್ಲಿ ಮೊಡಿಫೈಡ ಬೈಕಗಳ ಕರ್ಕಶ ಸದ್ದು ಹಿರಿಯ ನಾಗರಿಕರಿಗೆ,ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯುಂಟು ಮಾಡುತ್ತಿದೆ.
ನಗರದಲ್ಲಿ ಕೆಲ ಮೋಟಾರ್ ಬೈಕ್ಗಳು ಉಂಟು ಮಾಡುತ್ತಿರುವ ಶಬ್ದ ಮಾಲಿನ್ಯ ಸಾರ್ವಜನಿಕರ ಮನಸ್ಥಿತಿ ಹಾಳುಗೆಡುವುವಂತೆ ಮಾಡಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಕೆಲ ಬೈಕ್ಗಳು ಸಾರ್ವಜನಿಕರ ಎದೆ ನಡುಗಿಸುತ್ತಿವೆ.ಅಕ್ಕ ಪಕ್ಕದಲ್ಲಿ ಚಾಲನಾ ಸ್ಥಿತಿಯಲ್ಲಿರುವ ಇತರ ಬೈಕ್ ಸವಾರರು, ಸದ್ದಿನಿಂದ ಕಚಾಲನೆಯ ನಿಯಂತ್ರಣ ಕಳೆದುಕೊಂಡು ಅಪಘಾತಗಳಾಗುತ್ತಿವೆ.
ಮೋಟಾರು ಕಾಯ್ದೆಯ ಪ್ರಕಾರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ಇಂತಿಷ್ಟೆ ಇರಬೇಕೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಆದರೆ ನಗರದಲ್ಲಿರುವ ಬೈಕ ನಿಗದಿತ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಹೊರಸೂಸುವ ವಾಹನಗಳ ಮಾಲಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡು ಮೊಡಿಫೈಡ ಮಾಡಿದ ಸೈಲಂಸರಗಳನ್ನು ತೆಗೆಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಕಳೆದ ಹಲವಾರು ದಿನಗಳಿಂದನಗರದ ಜೆ.ಎನ ರಸ್ತೆಯಲ್ಲಿ ಆರ.ಎಕ್ಸ ೧೦೦ ಬೈಕ ಸವಾರನೊಬ್ಬ ಬೈಕನ ಮೊಡಿಫೈಡ ಸೈಲೆಂಸರನಿಂದ ಕರ್ಕಶ ಸದ್ದು ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಯಾಗುತ್ತಿದ್ದು ಇಂತವರ ವಿರುದ್ಧ ಸಂಬಂಧಪಟ್ಟ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
