ದಾಂಡೇಲಿ:
ಬಿಜೆಪಿ ದಾಂಡೇಲಿ ಮಂಡಲದ ವತಿಯಿದ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಪದ್ಮಾವತಿ ಅವರಿಗೆ ಇಂದು ಬೆಳಿಗ್ಗೆ ಅವರ ಸ್ವಗೃಹದಲ್ಲಿ ಸನ್ಮಾನ ಮಾಡಲಾಯಿತು.ಸನ್ಮಾನ ಮಾಡಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪ್ರಕಾರ ಕಟ್ಟ ಕಡೆಯ ವ್ಯಕ್ತಿಗೆ ಎಲ್ಲ ರೀತಿಯ ಹಕ್ಕು ಬಾಧ್ಯತೆಗಳು ಸಿಗಬೇಕು ಎನ್ನುವ ವಿಚಾರದೊಂದಿಗೆ ಇವತ್ತು ಅತಿ ಕಡು ಬಡತನದಲ್ಲಿಯೇ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಈಗ ನ್ಯಾಯಾಧೀಶೆಯಾಗಿ ಆಯ್ಕೆಯಾದ ದಾಂಡೇಲಿಯ ಪದ್ಮಾವತಿಯವರ ಸಾಧನೆ ಮತ್ತು ಛಲಕ್ಕೆ ಇವತ್ತು ಫಲ ಸಿಕ್ಕಿದಂತಾಗಿದೆ. ಜೊತೆ ಜೊತೆಗೆ ಇದು ಸಂವಿಧಾನಕ್ಕೆ ಸಿಕ್ಕ ಸಂದ ಜಯ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಬಿಜೆಪಿ ದಾಂಡೇಲಿ ಘಟಕದ ಅಧ್ಯಕ್ಷ ಬುಧವಂತಗೌಡ ಪಾಟೀಲ ಉಪಾಧ್ಯಕ್ಷ ಗುರು ಮಠಪತಿ,ಪ್ರಧಾನ ಕಾರ್ಯದರ್ಶಿ, ಗಿರೀಶ್ ಟೋಸೂರ, ಮಿಥುನ್ ನಾಯಕ ಪ್ರಮುಖರಾದ ರವಿ ಗಾಂವ್ಕರ್,ರೋಷನ್ ನೇತ್ರಾವಳಿ ,ಈರಯ್ಯ ಸಾಲಿಮಠ , ಪವನ್ ಕೊನ್ನೂರ,ಸುಭಾಷ್ ಬೋವಿವಡ್ಡರ್ ,ಮಂಜು ಶೆಟ್ಟಿ, ಶ್ವೇತಾ ಶೆಟ್ಟಿ ,ಚನ್ನಬಸಪ್ಪ ಮುರುಗೋಡ
ಮುಂತಾದವರು ಉಪಸ್ಥಿತರಿದ್ದರು.
