ಕುಮಟಾ:
ದಲಿತ ಸಿಎಂ ವಿಚಾರವಾಗಿ ಎಲ್ಲೆಡೆ ಚರ್ಚೆ ನಡೆಯುವುದು ಸಹಜ. ಆದರೆ ಚರ್ಚೆ ನಡೆದ ತಕ್ಷಣವೇ ಸಿಎಂ ಆಯ್ಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳು ಹಲವರು ಇದ್ದರೂ, ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ ಎಂದು ಲೋಕೋಪಯೋಗಿಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ಕುಮಟಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,
ಈಗಾಗಲೇ ರಾಜ್ಯಕ್ಕೆ ಮುಖ್ಯಮಂತ್ರಿ ಇದ್ದಾರೆ. ಬದಲಾವಣೆ ಮಾಡುವ ಯಾವುದೇ ಪ್ರಶ್ನೆಯೇ ಇಲ್ಲ. ಸಿಎಂ ಅವರನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಪಕ್ಷದೊಳಗಿನ ಈ ಗೊಂದಲಕ್ಕೆ ಬ್ರೇಕ್ ಹಾಕಬೇಕಾಗಿದೆ. ಈ ವಿಚಾರದಲ್ಲಿ ಪಕ್ಷದಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ ಎಂದು ಹೇಳಿದರು.
ಶಾಸಕರು ವಿದೇಶ ಪ್ರವಾಸ ಹೋಗುವುದು ಸಾಮಾನ್ಯ. ಈ ಗೊಂದಲಕ್ಕೂ ವಿದೇಶ ಪ್ರವಾಸಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು. ನಾವ್ಯಾರು ಸಿಎಂ ರೇಸ್ನಲ್ಲಿ ಇಲ್ಲ. ಈಗ ರಾಜ್ಯವನ್ನು ಆರಾಮವಾಗಿ ಸುತ್ತುತ್ತಿದ್ದೇವೆ ಎಂದರು.
