ದಾಂಡೇಲಿ: ಕೇಲ ದಿನಗಳ ಹಿಂದೆಯಷ್ಟೆ ದಾಂಡೇಲಿ-ಅಳ್ನಾವರ ರೈಲು ಪುನರಾರಂಭವಾಗಿದ್ದು ಬಹಳ ಖುಷಿಯ ಸಂಗತಿ ಆದರೆ ಇಗಿರುವ ದಾಂಡೇಲಿ -ಅಳ್ನಾವರ ರೈಲಿನ ವೇಳಾ ಪಟ್ಟಿಯನ್ನು ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯವನ್ನು ಬದಲಾವಣೆ ಮಾಡಬೇಕೆಂದು ಬ್ಲಾಕ್ ಕಾಂಗ್ರೇಸ ಅಧ್ಯಕ್ಷ್ಯ ಮೋಹನ ಹಲವಾಯಿ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಅಂಬೇವಾಡಿಯ ರೈಲು ನಿಲ್ದಾಣದಲ್ಲಿ ರೈಲು ನಿಲ್ದಾಣದ ಅಧಿಕಾರಿಗೆ(ಸ್ಟೇಷನ್ ಮಾಸ್ಟರ ) ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಮಯ ಬದಲಾವಣೆ ಮಾಡಬೇಕೆಂದು ಮಾತನಾಡುತ್ತ.ನಮ್ಮ ನಾಯಕರಾದ ಆರ.ವ್ಹಿ ದೇಶಪಾಂಡೆಯವರು ರೈಲ್ವೆ ಅಧಿಕಾರಿಗಳಿಗೆ ಇಗಾಗಲೆ ಸಮಯ ಬದಲಾವಣೆ ಮಾಡಬೇಕೆಂದು ಪತ್ರ ಬರೆದಿದ್ದಾರೆ. ಅದಕ್ಕೆ ರೈಲ್ವೆ ಅಧಿಕಾರಿಗಳು ಕೂಡ ಬದಲಾವಣೆ ಮಾಡುವದಾಗಿ ಭರವಸೆ ನಿಡಿದ್ದಾರೆ . ದಾಂಡೇಲಿಯಿಂದ -ಅಳ್ನಾವರಕ್ಕೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವದರಿಂದ ರೈಲ್ವೆ ಇಲಾಖೆಗೆ ನಷ್ಟವಾಗುತ್ತಿದ್ದು ಇದೆ ರೀತಿಯಾದರೆ ದಾಂಡೇಲಿ-ಅಳ್ನಾವರ ನಡುವೆ ರೈಲು ಓಡುವುದು ಕಷ್ಟಕರವೆಂಬ ಮಾತು ಇಲಾಖೆಯಿಂದ ಕೇಳಿಬರುತ್ತಿದೆ.ಆದರೆ ನಾನು ರೈಲ್ವೆ ಇಲಾಖೆಗೆ ಮನವಿ ಮಾಡುತ್ತೆನೆ.
ಇಗ ನಿಗಧಿಯಾಗಿರುವ ರೈಲ್ವೆ ಸಮಯದಲ್ಲಿ ಅಳ್ನಾವರಕ್ಕೆ ಪ್ರಯಾಣ ಬೆಳಸಿದಾಗ ಅಳ್ನಾವರ ಮುಟ್ಟಿದ ನಂತರ ಅಳ್ನಾವರದಿಂದ ಬೆಂಗಳೂರಿಗಾಗಲಿ ಅಥವಾ ಮುಂಬೈಗಾಗಲಿ ಆ ಸಮಯದಲ್ಲಿ ಯಾವುದೆ ರೈಲು ಇರುವುದಿಲ್ಲ ಆ ಕಾರಣಕ್ಕಾಗಿ ಬೆಂಗಳೂರು ಹಾಗೂ ಮೈಸೂರು ಮುಂಬೈಗೆ ಸಂಪರ್ಕ ಹೊಂದುವ ರೀತಿಯಲ್ಲಿ ದಾಂಡೇಲಿ-ಅಳ್ನಾವರ ರೈಲಿನ ಸಮಯವನ್ನು ಬದಲಾಯಿಸಬೇಕು .ಇದರಿಂದ ಪ್ರಯಾಣಿಕರ ಸಂಖ್ಯೆಯು ಹೆಚ್ಚುತ್ತದೆ ಹಾಗೂ ದಾಂಡೇಲಿಗೆ ಬರುವ ಪ್ರವಾಸಿಗರಿಗೂ ಅನುಕೂಲವಾಗುತ್ತದೆ ಇದರಿಂದ ದಾಂಡೇಲಿ-ಅಳ್ನಾವರ ರೈಲು ನಿರಂತರವಾಗಿ ನಡೆಯುತ್ತದೆ ಹಾಗೂ ದಾಂಡೇಲಿಯಲ್ಲಿ ಉತ್ತರ ಭಾರತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮುಂಗಡ ರೈಲ್ವೆ ಟಿಕೆಟ ಬೂಕಮಾಡಲು ಅಳ್ನಾವರ ,ಲೊಂಡಾ ಹಾಗೂ ಅಂಚೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ .ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ದೂರದ ಊರಿನ ಪ್ರಯಾಣಕ್ಕೆ ಮುಂಗಡ ರೈಲ್ವೆ ಟಿಕೆಟ ಬೂಕ ಮಾಡಲು ರಿಸರ್ವೆಶನ ಟಿಕೆಟ ಕೌಂಟರನ್ನು ತೆಗೆಯಬೇಕೆಂದು ಮನವಿ ಮಾಡಿದರು. ಇ ಸಂದರ್ಭದಲ್ಲಿ ಸ್ಟೆಷನ್ ಮಾಸ್ಟರ ಚಂದ್ರಕಾಂತ , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವ್ಕರ್ ಅನಿಲ ದಂಡಗಲ್, ಫ್ರಾನ್ಸಿಸ್ ಮಸ್ಕೇರ್ನೆಸ್, ದಿವಾಕರ್ ನಾಯಕ,ತಸ್ವರ ಸೌದಾಗರ್ ,ಅನಿಲ್ ನಾಯ್ಕರ್ ಹಾಗೂ ಮುಂತಾದವರಿದ್ದರು.
