ದಾಂಡೇಲಿ : ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ದಾಂಡೇಲಿಯ ಪದ್ಮಾವತಿ ಮಾದಿಗರವರನ್ನು ದಾಂಡೇಲಿ ನಗರಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ನ್ಯಾಯಾಧೀಶರಾದ ಪದ್ಮಾವತಿ ಮಾದಿಗರವರವರನ್ನ ಸನ್ಮಾನಿಸಿ ಮಾತನಾಡಿದ ಪೌರಾಯುಕ್ತ ವಿವೇಕ್ ಬನ್ನೆಯವರು ನಿಜಕ್ಕೂ ಇದೊಂದು ದಾಂಡೇಯ ಅಭಿಮಾನದ ಸಂಗತಿಯಾಗಿದೆ. ಪದ್ಮಾವತಿ ಮಾದಿಗರವರು ಅತ್ಯಂತ ಕಷ್ಟದ ಬದುಕಿನ ಜೊತೆಗೆ ತಮ್ಮ ಶಿಕ್ಷಣಾ ಅಭ್ಯಾಸವನ್ನು ಮಾಡಿ ಅಸಾಮಾನ್ಯವಾದ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಧನೆ ಇಂದಿನ ವಿದ್ಯಾರ್ಥಿ, ಯುವಜನರಿಗೆನ ಪ್ರೇರಣೆ ಯಾದದ್ದು ಇವರು ತಮ್ಮ ವೃತ್ತಿಯ ಜೊತೆಗೆ ದಾಂಡೇಲಿಯ ಹಿರಿಮೆಯನ್ನು ನಾಡಿನಾದ್ಯಂತ ಪಸರಿಸುವಂತೆ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಅಶ್ಪಾಕ್ ಶೇಖ್, ರಾಜ್ಯ ಮಾನವ ಹಕ್ಕುಗಳ ಸಂಘಟನೆಯ ನಿರ್ದೇಶಕರಾದ ಪಿರೋಜಾ ಫೀರ್ಜಾದೆ, ನಗರಸಭೆಯ ಅಧಿಕಾರಿ ನಾಗರಾಜ ತೇರದಾಳ ಸಾಂದರ್ಭಿಕವಾಗಿ ಮಾತನಾಡಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶರಾದ ಪದ್ಮಾವತಿ ಮಾದಿಗರವರು ನಾನು ದಾಂಡೇಲಿಯ ಮಣ್ಣಿನ ಮಗಳು. ನನ್ನ ಈ ಓದು ಮತ್ತು ಸಾಧನೆಯ ಹಿಂದೆ ಈ ನೆಲದ ಅನೇಕ ಮಹನೀಯರ ಸಹಕಾರವಿದೆ. ನನ್ನ ಸಾಧನೆಗೆ ಸಹಕರಿಸಿದ ಹಳಿಯಾಳ ಹಾಗೂ ದಾಂಡೇಲಿಯ ವಕೀಲರ ಸಂಘ ಹಾಗೂ ನನ್ನ ಓದಿಗೆ ಎಲ್ಲ ರೀತಿಯ ಬೆಂಬಲಿ ನೀಡಿದ ವಕೀಲರ ಪರಿಷತ್ತು ಹಾಗೂ ನನ್ನ ಕುಟುಂಬ, ಮತ್ತು ಸಹೋದರರನ್ನ ಮರೆಯಲಾರೆ ಎಂದರು. ಇಂದು ಶಿಕ್ಷಣ ಅತ್ಯಂತ ಮಹತ್ವವಾಗಿದ್ದು , ನಮ್ಮ ಓದು ಮತ್ತು ಸಾಧನೆಗೆ ಯಾವ ಸಾಮಾಜಿಕ ಸಮಸ್ಯೆಗಳು ಕೂಡ ಅಡ್ಡಿ ಬರುವುದಿಲ್ಲ. ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮಲ್ಲಿರಬೇಕು. ಸಂವಿಧಾನ ನಮಗೆ ಎಲ್ಲವನ್ನೂ ನೀಡಿದೆ ಎಂದ ಅವರು ಸಂವಿಧಾನದ ಆಶಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ವ್ಯವಸ್ಥಾಪಕ ಪರಶುರಾಮ್ ಶಿಂದೆ,ನಗರಸಭೆಯ ಅಕೌಂಟಂಟ ನಾಗರಾಜ್ ತೆರೆದಾಳ ಕಂದಾಯ ನಿರೀಕ್ಷಕರಾದಂತಹ ಬಾಳು ಗವಸ್ ಶಿವಪ್ಪ ಉಪ್ಪಾರ್
ಹಾಗೂ ನಗರಸಭಾ ಸದಸ್ಯರು ವಿವಿಧ ಸಂಘಟನೆಗಳ ಪ್ರಮುಖರು, ನಾಗರಿಕರು ಉಪಸ್ಥಿತರಿದ್ದರು
