ದಾಂಡೇಲಿ :
ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ಉತ್ತರ ಕರ್ನಾಟಕ ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಸಂಸ್ಥೆ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮ ಹಳಿಯಾಳ ಪುರಸಭೆಯಲ್ಲಿ ನಡೆಯಿತು.
ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಸಭಾಧ್ಯಕ್ಷರಾದ ಮಣಿಕಂದನ್ ಅಧ್ಯಕ್ಷತೆಯಲ್ಲಿ ಹಾಗೂ ಬೆಳಗಾವಿ ವಿಭಾಗದ ಮಹಿಳಾಧ್ಯಕ್ಷರಾದ ರೇಣುಕಾ ಬಂದಮ ನೇತೃತ್ವದಲ್ಲಿ ದಾಂಡೇಲಿ, ಹಳಿಯಾಳ ಮತ್ತು ಶಿರಶಿ ಘಟಕಗಳ ಪದಗ್ರಹಣ ನಡೆಯಿತು
ಹಳಿಯಾಳ ತಹಶೀಲ್ದಾರ್ ಪಿರೋಜಷಾ ಸೊಮನಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸಭಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತಿನ ಜಾನ್. ಜೆ. ಸಾಮೂವೆಲ್, ದಾಂಡೇಲಿ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಕಂಡಿ, ತಾಲೂಕು ವೈದ್ಯಾಧಿಕಾರಿ ಡಾ. ಅನಿಲ್ ನಾಯ್ಕ, ಅರಣ್ಯಾಧಿಕಾರಿ ಗಾಯತ್ರಿ. ವಿ.ವೇಲು, ರಾಷ್ಟ್ರೀಯ ಸಭಾಧ್ಯಕ್ಷ ಆರ್.ವೇಣು ಮೈಲಾರಿ, ಭಾಗವತಿ ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಬರ್ಲಿ, ಎ.ಮಾಲದಾರ್, ಮಾಲಾ ಬ್ರಿಗೇಂಜಾ, ಅನುಷಾ ಎಂಜಲ್ ಮೀನಾ ಎಂ. ಪೂಜಪ್ಪಾ, ಎಸ್.ಬಿ. ಚಂದ್ರಶೇಖರಾಚಾರಿ, ಮಂಗಲಾ ಕಶೀಲ್ಕರ್, ಪ್ರಮೀಳಾ ಮಾನೆ, ಸುಧಾಕರ ನಾಯಕ ಪೌಲ್ ಫರ್ನಾಂಡಿಸ್, ಸಂತೋಷ್ ಗಾವಡೆ ಸಂತೋಷ್ ಗಾವಡೆ ಅಶ್ವಾಕ್ ಶೇಖ್ ಮೊದಲಾದವರು ಇದ್ದರು.
