ದಾಂಡೇಲಿ:
ಜಂಟಿ ಆಯುಕ್ತರು, ಮಂಗಳೂರು ವಿಭಾಗ ರವರ ನಿರ್ದೇಶನ ಹಾಗೂ ಮ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ . ಕಾರವಾರ ಮತ್ತು ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಯಲ್ಲಾಪುರ ರವರ ಮಾರ್ಗದರ್ಶನದಲ್ಲಿ ದಿನಾಂಕ : 27/02/2026 ರಂದು ಮಧ್ಯಾಹ್ನ 1.50 ಗಂಟೆ ಸಮಯದಲ್ಲಿ ಅನಮೋಡ್ ತನಿಖಾ ಠಾಣೆಯ ಅಬಕಾರಿ ಉಪ ನಿರೀಕ್ಷಕರಾದ ಟಿ.ಬಿ.ಮಲ್ಲಣ್ಣವರ
ಹಾಗೂ ಸಿಬ್ಬಂದಿಗಳಾದ ಆನಂದ ರೆಡ್ಡಿ ,ಶ್ರೀಶೈಲ ಹಡಪದ , ಮತ್ತು ರಮೇಶ ರಾಠೋಡ ರವರು ಅನ್ಮೋಡ ತನಿಖಾ ಠಾಣೆ ಯಲ್ಲಿ ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿರುವಾಗ ಬಂದ ಖಚಿತ ಬಾತ್ಮಿ ಮೇರೆಗೆ ಒಂದು ಟಾಟಾ ಕಂಪನಿಯ ಇಂಟ್ರಾ ಫಿಕ್ ಅಪ್ ವಾಹನವು ಗೋವಾ ದಿಂದ ರಾಮನಗರದ ಕಡೆಗೆ ಬರುವುದು ಕಂಡುಬಂದಿದ್ದು, ಸದರಿ ವಾಹನವನ್ನು ತನಿಖಾ ಠಾಣೆಯ ಬದಿಯಲ್ಲಿ ನಿಲ್ಲಿಸಿ ವಾಹನವನ್ನು ತಪಾಸಣೆ ನಡೆಸಿದಾಗ 67. ಲೀ.(ಅರವತ್ತೇಳು ಲೀಟರ್) ಗೋವಾ ರಾಜ್ಯದ ಮದ್ಯ ಪತ್ತೆಯಾಗಿದ್ದು ದೊರೆತ ಮದ್ಯ ಹಾಗೂ ಒಂದು ಟಾಟಾ ಕಂಪನಿಯ ಇಂಟ್ರಾ ವಾಹನವನ್ನು ಜಪ್ತುಪಡಿಸಿಕೊಂಡು ಅಬಕಾರಿ ಉಪ ನಿರೀಕ್ಷಕರು ದಾಂಡೇಲಿ ವಲಯ ರವರಿಗೆ ಮುದ್ದೆಮಾಲು, ಟಾಟಾ ಕಂಪನಿಯ ಇಂಟ್ರಾ ವಾಹನ ವನ್ನು ಹಸ್ತಾಂತರಿಸಲಾಯಿತು. ಮದ್ಯದ ಮೌಲ್ಯ 16080/- ರೂಪಾಯಿಗಳು ಮತ್ತು ವಾಹನದ ಅಂದಾಜು ಮೌಲ್ಯ 6 ಲಕ್ಷ ರೂಪಾಯಿಗಳು. ಒಟ್ಟು ಮೌಲ್ಯ 6 ಲಕ್ಷ 16 ಸಾವಿರದ 80 ರೂಪಾಯಿಗಳಾಗಿರುತ್ತದೆ.
