ದಾಂಡೇಲಿ :
ಕಾಡಾನೆಯೊಂದು ದನದ ಕೊಟ್ಟಿಗೆಗೆ ನುಗ್ಗಿ ಕೊಟ್ಟಿಗೆ ಧ್ವಂಸ ಮಾಡಿ, ಎಮ್ಮೆಗೆ ಮತ್ತು ಕರುವಿಗೆ ಗಾಯಗೊಳಿಸಿದ್ದಲ್ಲದೇ ಕಬ್ಬಿನ ಗದ್ದೆಗೂ ದಾಳಿ ಮಾಡಿದ ಘಟನೆ ಇಂದು ಸೋಮವಾರ ನುಸು ಮುಂಜಾನೆ ದಾಂಡೇಲಿ ತಾಲೂಕಿನ ಆಲೂರಿನಲ್ಲಿ ನಡೆದಿದೆ.
ಆಲೂರಿನಲ್ಲಿ ಪುಂಡಲೀಕ ಜಾಧವ ಎಂಬವರ ಹೊಲದಲ್ಲಿರುವ ದನದ ಕೊಟ್ಟಿಗೆಯನ್ನು ಕಾಡಾನೆ ಧ್ವಂಸಗೊಳಿಸಿದೆ. ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ ಎಮ್ಮೆ ಮತ್ತು ಎಮ್ಮೆಯ ಕರುವಿಗೆ ಗಾಯವಾಗಿದೆ.
