ಕಾರವಾರ:
ಭಾರತ ಹಾಗೂ ನ್ಯೂಜಿಲೆಂಡ್ ಟಿ-20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯವನ್ನು ಸಾರ್ವಜನಿಕರು ಒಟ್ಟಾಗಿ ವೀಕ್ಷಿಸಲು ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರೋಟರಿ ಕಾರವಾರ ಸೀಸೈಡ್ ಅವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರವಿವಾರ ಸಂಜೆ 6:45ಕ್ಕೆ ಕಾರವಾರದ ರವೀಂದ್ರನಾಥ ಠಾಗೋರ್ ಸಮುದ್ರ ತೀರದ ಚಿಲ್ಮನ್ ಪಾರ್ಕ್ನಲ್ಲಿ ದೊಡ್ಡ ಎಲ್ಇಡಿ (LED) ಪರದೆಯ ಮೇಲೆ ಪಂದ್ಯವನ್ನು ನೇರವಾಗಿ ಪ್ರದರ್ಶಿಸಲಾಗುತ್ತದೆ. ಕ್ರಿಕೆಟ್ ಅಭಿಮಾನಿಗಳು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಬಂದು ಪಂದ್ಯವನ್ನು ಒಟ್ಟಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ ಮುಕ್ತವಾಗಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರಿಕೆಟ್ನ ಉತ್ಸಾಹ, ಸಂಭ್ರಮ ಮತ್ತು ಜಯದ ಕ್ಷಣಗಳನ್ನು ಒಟ್ಟಾಗಿ ಅನುಭವಿಸಲು ವೇದಿಕೆಯಾಗಿದೆ.
