ದಾಂಡೇಲಿ:
ಅಳ್ನಾವರ – ದಾಂಡೇಲಿ ನಡುವೆ DEMU ಪ್ರಯಾಣಿಕ ರೈಲು ಸೇವೆಯನ್ನು ಪ್ರಾರಂಭಿಸಿರುವುದು ಈ ಭಾಗದ ಜನರ ಕನಸು ನನಸಾದ ದಿನ. ಇಂದು ದಾಂಡೇಲಿ ಜನರ ಬೇಡಿಕೆಯಂತೆ ಮಾರ್ಚ ೧೭ ರಿಂದದಾಂಡೇಲಿ -ಅಳ್ನಾವರ ರೈಲು ಸಮಯದಲ್ಲಿ ಬದಲಾವಣೆಯಾಗಿದ್ದು ಸಂತಸ ತಂದಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ್ಯ ಮೋಹನ ಹಲವಾಯಿ ಹೇಳಿದರಿ.ಅವರು ಇಂದು ಸಂಜೆ ನಡೆದ ಪತ್ರಕಾ ಗೋಷ್ಠಿ ಯಲ್ಲಿ ಮಾತನಾಡುತ್ತ. ಇಂದು ಸದರಿ ರೈಲ್ವೆ ಸೇವೆಯನ್ನು ಭಾನುವಾರವು ಕೂಡ ಸಂಚರಿಸುವಂತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೇ ನಮ್ಮ ನೆಚ್ಚಿನ ಶಾಸಕರಾರ ಆರ.ವ್ಹಿ ದೇಶಪಾಂಡೆಯವರು ರೈಲ್ವೆ ಸಚಿವರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳ ಸಮ್ಮುಖದಲ್ಲಿ ಮನವಿ ಮಾಡಿದ್ದರು.
ಹಾಗೂ ಕೇಲ ದಿನಗಳ ಹಿಂದೆ ಬ್ಲಾಕ ಕಾಂಗ್ರೆಸ್ ಘಟಕದಿಂದಲು ಹುಬ್ಬಳ್ಳಿ ಹಾಗೂ ಬೆಳಗಾವಿ ಕಡೆಗೆ ಸಂಚರಿಸುವ ದೂರದ ರೈಲುಗಳೊಂದಿಗೆ ಉತ್ತಮ ಸಂಪರ್ಕ ಸಿಗುವಂತೆ ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಸಮಯಗಳನ್ನು ಬದಲಾವಣೆ ಮಾಡಬೇಕೆಂದು ಮನವಿ ಮಾಡಿದ್ದೆವು.
ಮನವಿಗೆ ತಕ್ಷಣ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು ರೈಲು ಸೇವೆಯ ಸಮಯವನ್ನು ಪುನರ್ ಪರಿಶೀಲಿಸಿ, ವಾರದ ಗುರುವಾರವನ್ನು ಹೊರತುಪಡಿಸಿ ಭಾನುವಾರದಂದು ಕೂಡ DEMU ರೈಲು ಸೇವೆಯನ್ನು ಆರಂಭಿಸುವ ಕುರಿತು ಆದೇಶ ಹೊರಡಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ.
ಈ ನಿರ್ಧಾರದಿಂದ ದಾಂಡೇಲಿ ಮತ್ತು ಅಳ್ನಾವರ ಭಾಗದ ಜನತೆಗೆ ಮಾತ್ರವಲ್ಲದೆ ಉದ್ಯೋಗಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ ಮತ್ತು ಪ್ರವಾಸಕ್ಕಾಗಿ ಸಂಚರಿಸುವ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ನಮ್ಮ ಶಾಸಕರಾದ ಆರ.ವ್ಹಿ ದೇಶಪಾಂಡೆಯವರಿಗೆ ಮತ್ತು ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಬ್ಲಾಕ್ ಕಾಂಗ್ರೇಸನಿಂದ ಹಾಗೂ ದಾಂಡೇಲಿಯ ಸಾರ್ವಜನಿಕರ ವತಿಯಿಂದ ಧನ್ಯವಾದ ತಿಳಿಸುತ್ತವೆ ಎಂದು ಹೇಳಿದರು. ಇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಷಿರ್ ಗಿರಿಯಾಳ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವ್ಕರ್, ಅನಿಲ ದಂಡಗಲ್, ದಿವಾಕರ್ ನಾಯಕ,ತಸ್ವರ ಸೌದಾಗರ್ ,ಅನಿಲ್ ನಾಯ್ಕರ್ ,ರಾಮಲಿಂಗ ಜಾಧವ,ದಾದಾಪಿರ ನದಿಮುಲ್ಲಾ ,ಯಾಸ್ಮೀನ ಕಿತ್ತೂರ ಹಾಗೂ ಮುಂತಾದವರಿದ್ದರು.
ರೈಲ್ವೆ ಸಮಯ:
ಸಮಯದ ಬದಲಾವಣೆಯಂತೆ, ರೈಲು ಸಂಖ್ಯೆ 76501 ಅಳ್ನಾವರದಿಂದ ಬೆಳಿಗ್ಗೆ 05:00 ಕ್ಕೆ ಹೊರಟು 05:45 ಕ್ಕೆ ದಾಂಡೇಲಿ ತಲುಪಲಿದೆ ಮತ್ತು ರೈಲು ಸಂಖ್ಯೆ 76502 ದಾಂಡೇಲಿಯಿಂದ ಬೆಳಿಗ್ಗೆ 06:15 ಕ್ಕೆ ಹೊರಟು 07:00 ಕ್ಕೆ ಅಳ್ನಾವರ ತಲುಪಲಿದೆ. ರೈಲು ಸಂಖ್ಯೆ 76503 ಅಳ್ನಾವರದಿಂದ ಬೆಳಿಗ್ಗೆ 07:35 ಕ್ಕೆ ಹೊರಟು 08:20 ಕ್ಕೆ ದಾಂಡೇಲಿ ತಲುಪಲಿದ್ದು, ಅದೇ ರೀತಿ ಸಂಜೆಯ ರೈಲು ಸಂಖ್ಯೆ 76505 ಅಳ್ನಾವರದಿಂದ 18:00 ಕ್ಕೆ ಹೊರಟು 18:45 ಕ್ಕೆ ದಾಂಡೇಲಿ ತಲುಪಲಿದ್ದು, ಮರಳಿ ಬರುವ ರೈಲು ಸಂಖ್ಯೆ 76506 ದಾಂಡೇಲಿಯಿಂದ 19:05 ಕ್ಕೆ ಹೊರಟು 19:50 ಕ್ಕೆ ಅಳ್ನಾವರ ತಲುಪಲಿದೆ.
