ದಾಂಡೇಲಿ : ಜಾಗತಿಕ ಯುದ್ಧ ವಿರೋಧಿಸಿ, ಜಾಗತಿಕ ಶಾಂತಿಗೆ ಹಾರೈಸಿ ಬೆಲೆ ಏರಿಕೆ ತಡೆಯಲು, ಭಾರತ ಸರ್ಕಾರವು ಸಾಮ್ರಾಜ್ಯ ಶಾಹಿ ಸಖ್ಯತೆ ಮಾಡಬಾರದೆಂದು ಆಗ್ರಹಿಸಿ ಜನತೆಯ ಪ್ರತಿರೋಧ ಸೋಮಾನಿ ವೃತ್ತದಲ್ಲಿ ನಡೆಯಿತು.
ಯುದ್ಧದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿ ಪ್ರತಿಭಟನಾ ನೀರತರು ಸೋಮಾನಿ ವೃತ್ತದಲ್ಲಿ ದೀಪಗಳೊಂದಿಗೆ ಸಭೆ ನಡೆಸಿದರು. ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷರಾದ ಯಮುನಾ ಗಾಂವ್ಕರ್ ಹಾಗೂ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ , ನಗರ ಸಭೆ ಮಾಜಿ ಸದಸ್ಯರಾದ ಡಿ ಸ್ಯಾಮ್ಸನ್ ಅವರುಗಳು ಸಭೆಯನ್ನು ಉದ್ದೇಶಿಸಿ ಮಾತಾಡಿ ಅಮೇರಿಕನ್ ಸಾಮ್ರಾಜ್ಯ ಶಾಹಿ ಇಸ್ರೇಲ್ ಜೊತೆಗೆ ಸೇರಿ ಇರಾನ್ ಮೇಲೆ ಸಾರಿರುವ ಯುದ್ಧ, ಸಾರ್ವಭೌಮ ರಾಷ್ಟ್ರಗಳ ಮೇಲಿನ ದಾಳಿ, ವೆನಿಜುವೆಲಾ ಅಧ್ಯಕ್ಷರಾದ ಮದುರೋ ದಂಪತಿಗಳ ಅಪಹರಿಸಿ ಹಿಂಸಿಸುತ್ತಿರುವುದು, ಪ್ಯಾಲಿಸ್ಟೈನ್ ಗಾಜಾ ಮೇಲಿನ ಆಕ್ರಮಣ ಎಲ್ಲವೂ ಸಂಪತ್ತನ್ನು ದೋಚುವ ಮತ್ತು ಚುನಾಯಿತ ಸರ್ಕಾರಗಳನ್ನು ಉರುಳಿಸಿ ಕೈಗೊಂಬೆ ಸರ್ಕಾರ ಸ್ಥಾಪಿಸುವ ಹುನ್ನಾರ ಮತ್ತು ಕ್ರೂರ ಎಫ್ ಸ್ಟೀನ್ ಫೈಲ್ ಮರೆ ಮಾಚುವ ಹುನ್ನಾರ ವಾಗಿದೆ.
ಭಾರತ ಸರ್ಕಾರ ಕೂಡ ತನ್ನ ವಿದೇಶಾಂಗ ನೀತಿಯನು ಕೂಡ ಬಲಿಕೊಡುವುದು ಖಂಡನೀಯ. ಬೆಲೆ ಏರಿಕೆಗೆ ಕಾರಣವಾಗಿರುವ ಅಮಾನವೀಯ ನೀತಿ ಹೇರುವ ಸಾವಿರಾರು ಜನರ ಬಲಿ ತೆಗೆಯುವ ಈ ಸರ್ವಾಧಿಕಾರಿ ಯುದ್ಧ ಕೋರ ನೀತಿ ನಿಲ್ಲಿಸಿ, ಶಾಂತಿ ಸ್ಥಾಪನೆ ಆಗಲಿ ಎಂದರು. ಯುದ್ಧ ಬೇಡ ಉದ್ಯೋಗ ಬೇಕು, ಯುದ್ಧ ಬೇಡ ಶಿಕ್ಷಣ ಬೇಕು, ಬಾಂಬುಗಳ ದಾಳಿ ನಿಲ್ಲಲಿ, ಮುಗ್ಧ ಜನರ ಸಾವು ನಿಲ್ಲಿಸಿ, ಬೆಲೆ ಏರಿಕೆ ತಡೆಗಟ್ಟಿ ಸಾಮ್ರಾಜ್ಯಶಾಹಿ ಗೆ ಮಣೆಹಾಕುವ ಭಾರತದ ನೀತಿ ಹಿಮ್ಮೆಟ್ಟಿಸಿ ಇತ್ಯಾದಿ ಘೋಷಣೆ ಹೇಳಲಾಯಿತು.
ಹಿರಿಯರಾದ ಮುರ್ತುಜಾ ಹುಸೇನ್ ಆನೆಹೊಸೂರ್, ಡಿವೈಎಫ್ಐ ತಾಲೂಕು ಕಾರ್ಯದರ್ಶಿ ಇಮ್ರಾನ್ ಹಾಗೂ ಮುಖಂಡರಾದ ಕಾಂತರಾಜ್, ಸಲ್ಮಾನ್ ಇಲ್ಲೂರಿ, ವಿಜಯ ಹರಿಜನ್, ರಮೇಶ ದೊಡ್ಮನಿ, ಇರ್ಶಾದ್ ಬೇಲೂರು, ಜಾಫರ್ ಮಸನಕಟ್ಟಿ, ಇರ್ಶಾದ್ ಇನ್ನೂ ಅನೇಕರು ಹಾಜರಿದ್ದರು.
