ದಾಂಡೇಲಿ:
ಗುಡುಗು ಸಿಡಿಲು ಸಹಿತ ಮಳೆಗೆ ದಾಂಡೇಲಿ ನಗರದ ಟೌನ್ ಶಿಪ್ ನ ಶಂಕರಮಠದ ಬಳಿಯ ಮನೆಯೊಂದರ ತೆಂಗಿನ ಮರಕ್ಕೆ ಸಿಡಿಲು ಬಡಿದ ಹಿನ್ನೆಲೆಯಲ್ಲಿ ತೆಂಗಿನ ಮರವು ಹೊತ್ತಿ ಉರಿದ ಘಟನೆ ಶನಿವಾರ ಸಂಜೆ ನಡೆದಿದೆ.
ಟೌನ್ ಶಿಪ್ ನಿವಾಸಿ ಎಸ್. ಪಿ ನಾಯ್ಕ ಅವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದೆ. ಬಿರುಸಿನಿಂದ ಪ್ರಾರಂಭ ಮಳೆ ಗಾಳಿ ಮಳೆಯಲ್ಲಿ ಈ ಅವಘಡ ನಡೆದಿದೆ. ಸುಮಾರು 6.15 ಕ್ಕೆ ಮರಕ್ಕೆ ಸಿಡಿಲು ಬಡಿದಿದೆ. ಮಳೆ ನಿಂತು ನಂತರ ಈ ದೃಶ್ಯ ನೋಡಲು ಜನರು ಜಮಾಯಿಸಿದ್ದರು. ಸ್ಥಳೀಯರು ಅಗ್ನಿಶಾಮಕ ಹಾಗೂ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು ಬೆಂಕಿ ನಂದಿಸಿದರು.
